ಕರ್ನಾಟಕ

ಚಿಕ್ಕಮಗಳೂರಿನಲ್ಲಿ ಬಿಎಸ್ವೈ ಜನಸಂಪರ್ಕ ಅಭಿಯಾನ

ರಾಜ್ಯ,(ಚಿಕ್ಕಮಗಳೂರು),ಜೂ.19-ಕಾಫಿ ನಾಡು ಚಿಕ್ಕಮಗಳೂರಿಗೆ ಭೇಟಿ ನೀಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಾಲ್ಲೂಕಿನ ಮರ್ಲೆ ಗ್ರಾಮದಲ್ಲಿ ಜನಸಂಪರ್ಕ ಅಭಿಯಾನ ನಡೆಸಿದರು.

ಗ್ರಾಮದ ದಲಿತ ಸಣ್ಣ ತಮ್ಮಯ್ಯ ಅವರ ಮನೆಯಲ್ಲಿ ಬಿಎಸ್ವೈ ಅಕ್ಕಿ ರೋಟ್ಟಿ, ಉಪ್ಪಿಟ್ಟು ಸವಿದರು. ನಂತರ ಗ್ರಾಮದಲ್ಲಿ ಜನಸಂಪರ್ಕ ಅಭಿಯಾನ ನಡೆಸಿದರು.

ಈ ಸಂದರ್ಭದಲ್ಲಿ ಸಂಸದೆ ಶೋಭಕರಂದ್ಲಾಜೆ, ಶಾಸಕರಾದ ಸಿ.ಟಿ.ರವಿ, ಡಿ.ಎನ್. ಜೀವರಾಜ್ ಇತರರು ಉಪಸ್ಥಿತರಿದ್ದರು. (ವರದಿ-ಎಸ್.ಎನ್,ಎಂ.ಎನ್)

Leave a Reply

comments

Related Articles

error: