ಮೈಸೂರು

ಕಳ್ಳರ ಸಂತೆ ನಾಟಕ ಪ್ರದರ್ಶನ

ಕಳ್ಳರ ಸಂತೆ ಹೆಸರೇ ಹೇಳುವಂತೆ ದುಷ್ಟ ಕಳ್ಳರ ಸುತ್ತ ಹೆಣೆದಿರುವ ಕಥಾ ಹಂದರದ ನಾಟಕವನ್ನು ರಂಗಾಯಣ ಕಲಾಮಂದಿರದ ಭೂಮಿಗೀತದಲ್ಲಿ ಅ.7ರಂದು ಮಂಡ್ಯದ ಪಿಇಎಸ್ ಕಾಲೇಜಿನ ವಿದ್ಯಾರ್ಥಿಗಳು ಪ್ರದರ್ಶಿಸಿದರು.

ಕಳ್ಳರ ಸಂತೆ : ಬರಗಾಲವಿದ್ದ ರಾಜ್ಯದಲ್ಲಿ ಜನತೆಯನ್ನು ಲೂಟಿ ದರೋಡೆ ಮಾಡುವ ಮೂಲಕ ಕಳ್ಳರು ಜೀವನ ನಡೆಸುತ್ತಿರುತ್ತಾರೆ. ಕಳವು ಮಾಡುವಾಗ ಒಬ್ಬ ಕಳ್ಳ ಸಿಕ್ಕಿಬೀಳುತ್ತಾನೆ. ರಾಜನು ಆ ಕಳ್ಳನಿಗೆ ಮರಣದಂಡನೆ ವಿಧಿಸುತ್ತಾನೆ. ರಾಜನನ್ನು ಕೊನೆಯ ಬಾರಿ ಭೇಟಿಯಾಗಬೇಕು ಎಂಬ ಅವನ ಇಚ್ಛೆಯಂತೆ ಭೇಟಿ ಮಾಡಿಸಿಲಾಗುತ್ತದೆ. ಆ ಸಮಯದಲ್ಲಿ ಕಳ್ಳನು ಆಸ್ಥಾನದಲ್ಲಿ ಪ್ರಾಮಾಣಿಕರನ್ನು, ಸತ್ಯಸ್ನೇಹಿ ಸರ್ವ ಸಮರ್ಥರನ್ನು ನ್ಯಾಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗದಲ್ಲಿ ನೇಮಿಸಿಕೊಳ್ಳಲು ಕೋರುತ್ತಾನೆ. ಅವನ ಸೂಚನೆಯಂತೆಯೇ ಒಬ್ಬರಲ್ಲೇ ಎಲ್ಲ ಗುಣಗಳಿರುವ ವ್ಯಕ್ತಿ ಮಹಾರಾಜನಿಗೆ ಸಿಗುತ್ತಾನೆಯೇ ಎನ್ನುವುದು ಈ ನಾಟಕದ ಕಥಾ ವಸ್ತು. ಪಿ.ಇ.ಎಸ್. ಪದವಿ ಕಾಲೇಜಿನ ವಿದ್ಯಾರ್ಥಿ ರವಿಕುಮಾರ್ ನಿರ್ದೇಶಿಸಿದ್ದರು. ಜಯಪ್ರಕಾಶ್ ಗೌಡ ಸಂಯೋಜನೆ ಮಾಡಿದ್ದರು.

 

Leave a Reply

comments

Related Articles

error: