ಮೈಸೂರು

ಪ್ರತ್ಯೇಕ ಪ್ರಕರಣ : ವಾಹನ ಕಳುವು

ಮೈಸೂರು,ಜೂ.19:- ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ನಗರದ ವಿವಿಧೆಡೆ ದ್ವಿಚಕ್ರವಾಹನ ಕಳುವಾಗಿರುವ ಕುರಿತು ದೂರು ದಾಖಲಾಗಿದೆ.

ನರಂಸಿಂಹರಾಜ ಠಾಣೆಯಲ್ಲಿ ಮಹ್ಮದ್ ಅಬ್ಬಾಸ್ ಎಂಬವರು ದೂರು ದಾಖಲಿಸಿದ್ದಾರೆ. ಅವರು ತಮ್ಮ  ಬಜಾಜ್ ಡಿಸ್ಕವರ್   ನಂ. KA-55 L-5991 ಬೈಕ್ ನ್ನು ಏ.30ರಂದು  ಬನ್ನಿಮಂಟಪ ಸಿ ಲೇಔಟ್‌ನಲ್ಲಿರುವ ಪಿರ್ದೋಸ್ ಮಸೀದಿ ಬಳಿ ಇರುವ ಪಾರ್ಕ್ ಪಕ್ಕದಲ್ಲಿ ಬೀಗ ಹಾಕಿ ನಿಲ್ಲಿಸಿ, ರಾತ್ರಿ 11 ರ ಸುಮಾರಿಗೆ ವಾಪಸ್ ಬಂದು ನೋಡಿದಾಗ, ನಿಲ್ಲಿಸಿದ್ದ ಜಾಗದಲ್ಲಿ ಬೈಕ್ ಇರಲಿಲ್ಲ. ಎಲ್ಲಾ ಕಡೆ ಹುಡುಕಿ ಸಿಗದಿರುವ ಕಾರಣ ಬೈಕ್ ನ್ನು ಪತ್ತೆ ಮಾಡಿಕೊಡುವಂತೆ ದೂರು ನೀಡಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ರಾಜು.ಕೆ.ಎಂಬವರು ಕೆ ಆರ್ ಠಾಣೆ ದೂರು ನೀಡಿದ್ದಾರೆ. ಹೀರೋ ಹೊಂಡಾ ಸ್ಪ್ಲೇಂಡರ್ ಪ್ರೊ, ಕೆಎ-45, ಎಲ್-9553. ನ್ನು ಜೂ.1 ರಂದು ಬೆಳಿಗ್ಗೆ 6.30ರ ಸುಮಾರಿಗೆ  ಎಂ.ಜಿ ರಸ್ತೆಯಲ್ಲಿರುವ ತರಕಾರಿ ಮಾರ್ಕೇಟ್ ಬಳಿ ನಿಲ್ಲಿಸಿ ನಂತರ ಬಂದು ನೋಡಲಾಗಿ ಬೈಕ್ ಕಾಣೆಯಾಗಿದೆ. ಎಲ್ಲಾ ಕಡೆ ಹುಡುಕಿ ಸಿಕ್ಕಿಲ್ಲ ಪತ್ತೆ ಮಾಡಿ ಕೊಡಿ, ಕಳ್ಳತನ ನಡೆಸಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ ಎಂದು ದೂರು ನೀಡಿದ್ದಾರೆ.

ಮರಂಕ ಎಂಬವರು  ಮಂಡಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಜೂ.8 ರಂದು ರಾತ್ರಿ 11 ರ ಸುಮಾರಿಗೆ  ತಮ್ಮ ಬೈಕ್ ನಂ. ಕೆಎ-08 ಇಜಡ್-5353 ನ್ನು #3828, 17 ನೇ ಕ್ರಾಸ್, ತಿಲಕ್ ನಗರ ಬಳಿ ನಿಲ್ಲಿಸಿ ಬೆಳಗ್ಗೆ ಎದ್ದು ನೋಡಲಾಗಿ ಕಾಣೆಯಾಗಿದ್ದು ಎಲ್ಲಾ ಕಡೆ ಹುಡುಕಿ ಸಿಗದಿದ್ದ ಕಾರಣ ಪತ್ತೆ ಮಾಡಿಕೊಡುವಂತೆ ದೂರು ನೀಡಿದ್ದಾರೆ.

ಸರಸ್ವತಿಪುರಂ ಠಾಣೆಯಲ್ಲಿ ಪ್ರಸನ್ನಕುಮಾರ್ ಎಂಬವರು ದೂರು ನೀಡಿದ್ದಾರೆ.  #210, 02 ನೇ ಕ್ರಾಸ್, ಬೋಗಾದಿ 02 ನೇ ಹಂತ ಬೈಕ್ ನಂ. ಕೆಎ-09 ಇ-6711 ನ್ನು  ತಮ್ಮ ಮನೆಯ ಮುಂದೆ ನಿಲ್ಲಿಸಿ ಬೆಳಗ್ಗೆ ಎದ್ದು ನೋಡಲಾಗಿ ಬೈಕ್ ಕಾಣೆಯಾಗಿದೆ. ಪತ್ತೆ ಮಾಡಿ ಕಳ್ಳತನ ನಡೆಸಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ ಎಂದು ದೂರು ನೀಡಿದ್ದಾರೆ.

(ಕೆ.ಎಸ್,ಎಸ್.ಎಚ್)

Leave a Reply

comments

Related Articles

error: