ಮೈಸೂರು

ಮೈಸೂರು ಮೃಗಾಲಯಕ್ಕೆ ಹೊಸ ಅತಿಥಿಗಳ ಆಗಮನ

ಮೈಸೂರು,ಜೂ.19:- ಮೈಸೂರು ಮೃಗಾಲಯದಲ್ಲಿ ಹೊಸ ಅತಿಥಿಗಳ ಆಗಮನವಾಗಿದ್ದು ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

ಮೈಸೂರು ಮೃಗಾಲಯಕ್ಕೆ ಆಗಮಿಸುವ ಪ್ರವಾಸಿಗರಿಗೆ ವಿಶೇಷ ಕಾದಿದೆ. ಇದೀಗ ಹೊಸದಾಗಿ ಕೆಲವು ಪ್ರಾಣಿಗಳು ಮೃಗಾಲಯಕ್ಕೆ ಆಗಮಿಸಿದ್ದು ಜನತೆಯನ್ನು ಆಕರ್ಷಿಸಲಿದೆ. ಕ್ಯಾಪ್ಚಿನ್ ಮಂಕಿ, ಸ್ವಾಂಪ್ ಡೀರ್ ,ಲೆಫರ್ಡ್ ಸೇರಿದಂತೆ ಹಲವು ಹೊಸ ಅತಿಥಿಗಳು ಪ್ರವಾಸಿಗರಿಗೆ ದರ್ಶನ ನೀಡಲಿವೆ. ಕಳೆದೆರಡು ತಿಂಗಳ ಹಿಂದೆ ಹಕ್ಕಿ ಜ್ವರದ ಭೀತಿಯಿಂದ ಪ್ರವಾಸಿಗರು ಮೃಗಾಲಯಕ್ಕೆ ತೆರಳುವುದನ್ನು ನಿಲ್ಲಿಸಿದ್ದರು. ಒಂದು ತಿಂಗಳ ಕಾಲ ಮೃಗಾಲಯಕ್ಕೆ ನಿರ್ಬಂಧವನ್ನೂ ವಿಧಿಸಲಾಗಿತ್ತು. ಇದೀಗ ಹೊಸ ಅತಿಥಿಗಳ ಸೇರ್ಪಡೆ ಪ್ರಾಣಿಪ್ರಿಯರಲ್ಲಿ ಸಂತಸವನ್ನು ಹೆಚ್ಚಿಸಿದೆ.  (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: