ದೇಶಪ್ರಮುಖ ಸುದ್ದಿ

ರಾಷ್ಟ್ರಪತಿ ಚುನಾವಣೆಯಲ್ಲಿ ರಾಮನಾಥ್ ಕೋವಿಂದ್ ಬಿಜೆಪಿ ಅಭ್ಯರ್ಥಿ : ಅಮಿತ್ ಷಾ ಘೋಷಣೆ

ನವದೆಹಲಿ, ಜೂ.19 : ರಾಷ್ಟ್ರಪತಿ ಹುದ್ದೆಗೆ ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿ ವತಿಯಿಂದ ಅಚ್ಚರಿಯ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗಿದೆ. ಪ್ರಸ್ತುತ ಬಿಹಾರ ರಾಜ್ಯದ ರಾಜ್ಯಪಾಲಗರಾಗಿರುವ ರಾಮನಾಥ್ ಕೋವಿಂದ್ ಅವರನ್ನು ರಾಷ್ಟ್ರಪತಿ ಸ್ಥಾನಕ್ಕೆ ಎನ್.ಡಿ.ಎ. ಅಭ್ಯರ್ಥಿಯಾಗಿ ಘೋಷಣೆ ಮಾಡಲಾಗಿದ್ದು, ಈ ವರೆಗೆ ಇವರ ಎಲ್ಲಿಯೂ ಚಾಲ್ತಿಯಲ್ಲಿರಲಿಲ್ಲ.

ಈ ಬಗ್ಗೆ ನವದೆಹಲಿಯಲ್ಲಿ ಇಂದು ನಡೆದ ಬಿಜೆಪಿ ಸಂಸದೀಯ ಪಕ್ಷದ ಸಭೆಯ ನಂತರ ಮಾಹಿತಿ ನೀಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು, ಬಿಹಾರ ರಾಜ್ಯದ ರಾಜ್ಯಪಾಲರಾದ ರಾಮನಾಥ್ ಕೋವಿಂದ್ ಅವರನ್ನು ರಾಷ್ಟ್ರಪತಿ ಸ್ಥಾನಕ್ಕೆ ಎನ್.ಡಿ.ಎ. ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿದೆ ಎಂದು ಘೋಷಿಸಿದರು.

ಜುಲೈ 17ಕ್ಕೆ ರಾಷ್ಟ್ರಪತಿ ಚುನಾವಣೆ ನಡೆಯಲಿದ್ದು, ಚುನಾವಣೆ ಘೋಷಣೆಯಾಗಿ ಈಗಾಗಲೇ ಹಲವು ದಿನಗಳೇ ಕಳೆದಿವೆ. ನಾಮಪತ್ರ ಸಲ್ಲಿಸಲು ಕೆಲವೇ ಕೆಲವು ದಿನಗಳು  ಬಾಕಿ ಇದ್ದು, ಬಿಜೆಪಿ ತನ್ನ ಅಭ್ಯರ್ಥಿಯ ಹೆಸರನ್ನು ಪ್ರಕಟಿಸಿದೆ.

ಬಿಜೆಪಿ ಗೆಲುವು ಸುಲಭ?

ರಾಷ್ಟ್ರಪತಿ ಚುನಾವಣೆಯಲ್ಲಿ ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರು ಮತ್ತು ಎಲ್ಲ ರಾಜ್ಯಗಳ ಶಾಸಕರು ಮತ ಚಲಾಯಿಸುವ ಹಕ್ಕುಳ್ಳವರಾಗಿದ್ದಾರೆ. ಈ ಎಲ್ಲ ಮತಗಳ ಒಟ್ಟು ಮೌಲ್ಯ 10,98,882. ಗೆಲುವು ಸಾಧಿಸಲು 92 ಸಾವಿರ ಮತಗಳು ಬೇಕು ಅಗತ್ಯವಿದ್ದು,  ಬಿಜೆಪಿಗೆ ಈಗಾಗಲೇ ಎನ್‍ಡಿಎ ಮಿತ್ರಪಕ್ಷಗಳು ಬೆಂಬಲ ಸೂಚಿಸಿವೆ. ಇನ್ನು ದಕ್ಷಿಣ ರಾಜ್ಯಗಳಲ್ಲಿ ತೆಲಂಗಾಣದ ಟಿಆರ್‍ಎಸ್‍, ಆಂಧ್ರದಲ್ಲಿ ತೆಲುಗು ದೇಸಂ ಮತ್ತು ವೈಎಸ್‍ಆರ್ ಕಾಂಗ್ರೆಸ್, ತಮಿಳುನಾಡಿನಲ್ಲಿ ಅಣ್ಣಾ ಡಿಎಂಕೆ ಪಕ್ಷಗಳು ಬೆಂಬಲ ಸೂಚಿಸಿವೆ.

ಬಿಜೆಪಿ ಅಭ್ಯರ್ಥಿ ಹೆಸರು ಪ್ರಕಟಿಸಿದ ನಂತರ ಬಿಜೆಪಿಗೆ ಬೆಂಬಲ ಸೂಚಿಸಬೇಕೆ ಬೇಡವೇ ಎಂಬ ವಿಷಯದ ಮೇಲೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮಹಾರಾಷ್ಟ್ರದಲ್ಲಿನ ಪ್ರಮುಖ ರಾಜಕೀಯ ಪಕ್ಷವಾಗಿರುವ ಶಿವಸೇನೆ ಅಧ್ಯಕ್ಷ ಉದ್ಧವ್ ಠಾಕ್ರೆ ಹೇಳಿದ್ದಾರೆ.

ಇನ್ನು ದಲಿತ ರಾಷ್ಟ್ರಪತಿ ಅಭ್ಯರ್ಥಿಯನ್ನು ಮಾಯಾವತಿ ಅವರು ಬೆಂಬಲಿಸಲಿದ್ದಾರೆ ಎನ್ನುವ ಅಭಿಪ್ರಾಯಗಳು ವ್ಯಕ್ತವಾಗಿವೆ. ಬಿಹಾರದ ರಾಜ್ಯಪಾಲರಾದ ಕಾರಣ ರಾಮನಥ್ ಗೋವಿಂದ್ ಅವರ ಹೆಸರನ್ನು ನಿತೀಶ್ ಕುಮಾರ್ ಕೂಡ ಬೆಂಬಲಿಸಬಹುದು ಎಂಬ ಲೆಕ್ಕಾಚಾರವಿದೆ.

ಹೀಗಾಗಿ ಬಿಜೆಪಿ ಗೆಲುವು ಸುಲಭ ಎಂದೇ ಹೇಳಲಾಗುತ್ತಿದ್ದು, ಕಾಂಗ್ರೆಸ್ ನೇತೃತ್ವದ ವಿಪಕ್ಷಗಳ ಒಕ್ಕೂಟ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎನ್ನುವುದು ಕುತೂಹಲದ ವಿಷಯವಾಗಿದೆ. ಬಿಜೆಪಿ ಅಭ್ಯರ್ಥಿಗೆ ಬೆಂಬಲ ಸೂಚಿಸುವುದೋ ಅಥವಾ ವಿಪಕ್ಷಗಳ ವತಿಯಿಂದ ತನ್ನದೇ ಆದ ಅಭ್ಯರ್ಥಿಯನ್ನು ಕಾಂಗ್ರೆಸ್ ಕಣಕ್ಕಿಳಿಸುವುದೋ ಎಂಬುದನ್ನು ಕಾದುನೋಡಬೇಕಿದೆ.

ರಾಮನಾಥ್ ಕೋವಿಂದ್ ಹಿನ್ನೆಲೆ :

ರಾಷ್ಟ್ರಪತಿ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ  ರಾಮನಾಥ್ ಕೋವಿಂದ್ ಅವರು ಜನಿಸಿದ್ದು, 1945 ರ ಅಕ್ಟೋಬರ್ 1 ರಂದು. ಉತ್ತರಪ್ರದೇಶದ ಕಾನ್ಪುರ ಸಮೀಪದ ಪರೋಕ್ ಗ್ರಾಮದಲ್ಲಿ. 2 ಬಾರಿ ರಾಜ್ಯಸಭಾ ಸದಸ್ಯರಾಗಿ ಸೇವೆಲ್ಲಿಸಿರುವ ಅವರು, 2015ರಲ್ಲಿ ಬಿಹಾರ ರಾಜ್ಯಪಾಲರಾಗಿ ನೇಮಕವಾದ್ದರು. ಇದಕ್ಕೂ ಮೊದಲು ಹೈಕೋರ್ಟ್ ಮತ್ತು ಸುಪ್ರಿಂ ಕೋರ್ಟ್‍ಗಳಲ್ಲಿ 10 ವರ್ಷ ಸೇವೆ ಸಲ್ಲಿಸಿದ ಅನುಭವವೂ ಅವರ ಜೊತೆಗಿದೆ.

75 ವರ್ಷ ವಯಸ್ಸಿನ ರಾಮನಾಥ್ ಕೋವಿಂದ್ ಅವರು, 1998 ರಿಂದ 2002 ರ ವರೆಗೆ ದಲಿತ ಮೋರ್ಚಾ ಅಧ್ಯಕ್ಷರಾಗಿ, ಮತ್ತು ಬಿಜೆಪಿ ರಾಷ್ಟ್ರೀಯ ವಕ್ತಾರರಾಗಿ ಸೇವೆ ಸಲ್ಲಿಸಿದ್ದಾರೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘ – ಆರ್‍ಎಸ್‍ಎಸ್ ಸದಸ್ಯರಾಗಿಯೂ ಸೇವೆ ಸಲ್ಲಿರುವ ಕೋವಿಂದ್ ಅವರು ದಲಿತ ಚಳವಳಿಯಲ್ಲೂ ಭಾಗವಹಿಸಿದ್ದಾರೆ.

-ಎನ್.ಬಿ.ಎನ್.

Leave a Reply

comments

Related Articles

error: