ದೇಶಪ್ರಮುಖ ಸುದ್ದಿ

ಜೆಟ್ ವಿಮಾನದಲ್ಲಿ ಜನಿಸಿದ ಮಗುವಿಗೆ ಜೀವನಪೂರ್ತಿ ಉಚಿತ ಪಾಸ್

ಮುಂಬೈ, ಜೂ.19 : ಜೆಟ್ ಏರ್’ವೇಸ್ ವಿಮಾನ ಸೌದಿಅರೇಬಿಯಾದಿಂದ ಭಾರತಕ್ಕೆ ಬರುತ್ತಿದ್ದ ವೇಳೆ ಮಾರ್ಗಮಧ್ಯದಲ್ಲಿ ಜನಿಸಿದ ಗಂಡು ಮಗುವಿಗೆ ಜೆಟ್ ಏರ್ ವಿಮಾನ ಸಂಸ್ಥೆಯು ಜೀವನಪೂರ್ತಿ ಉಚಿತ ಪ್ರಯಾಣದ ಪಾಸ್ ನೀಡಿದೆ. ಮೊದಲ ಬಾರಿಗೆ ತನ್ನ ಸಂಸ್ಥೆಯ ವಿಮಾನದಲ್ಲಿ ಮಗುವೊಂದು ಜನಿಸಿದ ಖುಷಿಗಾಗಿ ಜೆಟ್ ವಿಮಾನಯಾನ ಸಂಸ್ಥೆಯು ಉಚಿತ ಪಾಸ್ ನೀಡಿದೆ.

ಭಾನುವಾರ ಬೆಳಿಗ್ಗೆ 2.55ಕ್ಕೆ ಜೆಟ್ ಏರ್ವೇಸ್ 9 ಡಬ್ಲ್ಯು 569 ವಿಮಾನ ದಮ್ಮಾಮ್‍ನಿಂದ ಕೇರಳದ ಕೊಚ್ಚಿಗೆ ಪ್ರಯಾಣ ಬೆಳೆಸಿತ್ತು. ಮಾರ್ಗ ಮಧ್ಯೆ ವಿಮಾನದಲ್ಲಿದ್ದ ಮಹಿಳೆಯೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡಾಗ, ವೈದ್ಯಕೀಯ ಚಿಕಿತ್ಸೆ ಅಗತ್ಯವಿದೆ ಎಂದು ವಿಮಾನದ ಸಿಬ್ಬಂದಿ ತುರ್ತು ಘೋಷಣೆ ಮಾಡಿದರು. ತಕ್ಷಣ ವಿಮಾನವನ್ನು ಮುಂಬೈ ಮಾರ್ಗದತ್ತ ತಿರುಗಿಸಲಾಗಿತ್ತು.

ವಿಮಾನ ಅರಬ್ಬಿ ಸಮುದ್ರದ ಮೇಲ್ಭಾಗದಲ್ಲಿ ಪ್ರಯಾಣಿಸುತ್ತಿದ್ದಾಗಲೇ ಮಗುವಿಗೆ ತಾಯಿ ಜನ್ಮ ನೀಡಿದ್ದರು. ವಿಮಾನದ ಸಿಬ್ಬಂದಿ ಮತ್ತು ಕೇರಳಕ್ಕೆ ಪ್ರಯಾಣಿಸುತ್ತಿದ್ದ ದಾದಿಯರು ಮಹಿಳೆಗೆ ಹೆರಿಗೆ ಮಾಡಿಸಲು ನೆರವಾಗಿದ್ದರು. ಇದರೊಂದಿಗೆ ತಾಯಿಯ ಗರ್ಭದಿಂದ ವಿಮಾನದಲ್ಲಿ ಹೊಸ ಅತಿಥಿಯಾಗಿ ಮಗುವಿನ ಆಗಮನವಾಗಿದೆ ಎಂದು ವಿಮಾನ ಸಂಸ್ಥೆ ಹೇಳಿಕೊಂಡಿತ್ತು. ಇದೀಗ ಮುಂಬೈನ ಹೋಲಿ ಸ್ಪಿರಿಟ್ ಆಸ್ಪತ್ರೆಯಲ್ಲಿ ತಾಯಿ ಮಗು ಸುರಕ್ಷಿತವಾಗಿದ್ದಾರೆ.

-ಎನ್.ಬಿ.

Leave a Reply

comments

Related Articles

error: