ಮೈಸೂರು

ಜಂಬೂಸವಾರಿಗೆ ಕ್ಷಣಗಣನೆ: ನಡೆಯುತ್ತಿದೆ ತಾಲೀಮು

elephant-we-3ವಿಶ್ವವಿಖ್ಯಾತ ದಸರಾದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಗೆ ಇನ್ನು ಎರಡೇ ದಿನಗಳು ಬಾಕಿ ಇದ್ದು ಕ್ಷಣಗಣನೆ ಆರಂಭವಾಗಿದೆ. ದಸರಾ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಗಜಪಡೆಗೆ, ಅಶ್ವಗಳಿಗೆ ಶನಿವಾರ ಬೆಳಗ್ಗೆ ತಾಲೀಮು ನಡೆಸಲಾಯಿತು.

ಅರಮನೆ ಆವರಣದಲ್ಲಿ ನಡೆದ ತಾಲೀಮಿನಲ್ಲಿ ಅಂಬಾರಿ ಆನೆ ಅರ್ಜುನನಿಗೆ ಶಾಸಕ ಸೋಮಶೇಖರ್ ಸೇರಿದಂತೆ ಪೊಲೀಸ್ ಅಧಿಕಾರಿಗಳು ಪುಷ್ಪ ಅರ್ಪಿಸಿದರು. ಪೊಲೀಸ್ ಅಧಿಕಾರಿಗಳು 21 ಸುತ್ತು ಫಿರಂಗಿ ಸಿಡಿಸಿದರು.  ದಸರಾ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲಿರುವ  12 ಆನೆಗಳು 21 ಅಶ್ವಗಳು, ಸಶಸ್ತ್ರ ಮೀಸಲು ಪಡೆ, ಹೋಂಗಾರ್ಡ್, ಡಿಎಆರ್ ಪೊಲೀಸರು ತಾಲೀಮಿನಲ್ಲಿ ಪಾಲ್ಗೊಂಡು ಪಥಸಂಚಲನ ನಡೆಸಿದರು.

ಜಂಬೂ ಸವಾರಿಯ ಆರಂಭಕ್ಕೂ ಮುನ್ನ  ನಾಡಗೀತೆಯನ್ನು ಯಾವ ರೀತಿ ಹಾಡಬೇಕು ಎನ್ನುವ ಕುರಿತು ತಿಳಿಸಲಾಯಿತು. ಪ್ರಶಾಂತ ಮತ್ತು ದುರ್ಗಾಪರಮೇಶ್ವರಿ ಆನೆಗಳು ಕಳೆದೆರಡು ಬಾರಿ ನಡೆಸಿದ ತಾಲೀಮಿನಲ್ಲಿ ವಿಚಲಿತರಾದ ಕಾರಣ ಅವರ ಕಾಲಿಗೆ ಸರಪಳಿಯಿಂದ ಬಂಧಿಸಲಾಗಿತ್ತು. ಆದರೆ ಈ ಬಾರಿ ಅವೆರಡು ವಿಚಲಿತರಾಗದೆ ಅರ್ಜುನ, ಬಲರಾಮ, ಅಭಿಮನ್ಯು, ವಿಕ್ರಮ ಜೊತೆ ಗಜ ಗಾಂಭೀರ್ಯದಿಂದ ಹೆಜ್ಜೆ ಹಾಕುತ್ತಿರುವುದು ಕಂಡು ಬಂತು. ಫಿರಂಗಿಯ ಅಬ್ಬರಕ್ಕೆ  ಅರಮನೆ ಆವರಣದಲ್ಲಿದ್ದ ಪಾರ್ಕಿಂಗ್ ಕೌಂಟರ್ ನ ಕಿಟಕಿಯ ಗಾಜುಗಳು ಪುಡಿಪುಡಿಯಾಗಿವೆ.elephant-web-2

ಶನಿವಾರ ಸಂಜೆ ಹಾಗೂ ಭಾನುವಾರ ಬೆಳಿಗ್ಗೆಯೂ ತಾಲೀಮು ನಡೆಯಲಿದೆ.

Leave a Reply

comments

Related Articles

error: