ಮೈಸೂರು

ಚಿನ್ನದ ಅಂಬಾರಿಗೆ 27 ಕೋಟಿ ರೂ. ವಿಮೆ

ವಿಶ್ವವಿಖ್ಯಾತ ದಸರಾ ಜಂಬೂ ಸಾವಾರಿಯ ಮುಖ್ಯ ಆಕರ್ಷಣೆ 750 ಕೆಜಿಯ ಅಂಬಾರಿಗೆ 27 ಕೋಟಿ ರೂ.ಗಳ ವಿಮೆಯನ್ನು ಮಾಡಲಾಗಿದೆ. ವಿಮೆಯ ಅವಧಿಯು ಅಕ್ಟೋಬರ್ 10 ರಿಂದ 16ರವರೆಗೆ ಇದೆ. ಆರು ದಿನಗಳಿಗಾಗಿ ಜಿಲ್ಲಾಡಳಿತದ ವತಿಯಿಂದ ಜಿಲ್ಲಾಧಿಕಾರಿ ರಂದೀಪ್ ಅವರು ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಅವರ ಹೆಸರಿಗೆ ವಿಮೆ ಮಾಡಿ ಪತ್ರ ನೀಡಿದ್ದಾರೆ.

ಕಳೆದ ವರ್ಷ ದಸರಾ ಮಹೋತ್ಸವದ ಸಂದರ್ಭದಲ್ಲಿ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿಖಾ ಅವರು ತಮ್ಮ ಹೆಸರಿನಲ್ಲಿಯೇ ವಿಮೆ ಪಡೆದಿದ್ದರು. ಜಿಲ್ಲಾಡಳಿದ ಈ ಕ್ರಮಕ್ಕೆ ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಅಸಮಾಧಾನ ವ್ಯಕ್ತಪಡಿಸಿ ಜಂಬೂ ಸವಾರಿಗೆ ಅಂಬಾರಿಯನ್ನು ನೀಡಲು ಎರಡು ಗಂಟೆಗಳ ಕಾಲ ವಿಳಂಬ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಚಿನ್ನದ ಅಂಬಾರಿಯನ್ನು ಜಂಬೂಸವಾರಿ ಸಂದರ್ಭದಲ್ಲಿ ಮಾತ್ರ ಹೊರ ತೆಗೆಯಲಾಗುತ್ತದೆ. ಉಳಿದ ದಿನಗಳಲ್ಲಿ ಅಂಬಾವಿಲಾಸ ಅರಮನೆಯ ಗೊಂಬೆ ತೊಟ್ಟಿಯ ಉತ್ತರ ಭಾಗದಲ್ಲಿ ಸಾರ್ವಜನಿಕ ವೀಕ್ಷಣೆಗೆ ಇಡಲಾಗಿರುತ್ತದೆ.

Leave a Reply

comments

Related Articles

error: