ಕರ್ನಾಟಕ

ರಾಷ್ಟ್ರಗೀತೆ ಕಡ್ಡಾಯ: ಸುಪ್ರೀಂ ಆದೇಶ ಪಾಲಿಸದ ಚಾ.ನಗರದ ಕೆಲ ಶಾಲಾ-ಕಾಲೇಜು

ಚಾಮರಾಜನಗರ,ಜೂ.20-ಶಾಲಾ-ಕಾಲೇಜುಗಳಲ್ಲಿ ರಾಷ್ಟ್ರಗೀತೆ ಕಡ್ಡಾಯ ಎಂದು ಸುಪ್ರೀಂ ಕೋರ್ಟ್ ಆದೇಶವಿದ್ದರೂ ಚಾಮರಾಜನಗರದ ಕೆಲ ಶಾಲಾ-ಕಾಲೇಜುಗಳಲ್ಲಿ ಈ ನಿಯಮವನ್ನು ಗಾಳಿಗೆ ತೂರಿದ್ದಾರೆ.

ಚಾಮರಾಜನಗರ ಪಟ್ಟಣದ ಕೆಲ ಶಾಲಾ-ಕಾಲೇಜುಗಳನ್ನು ಬಿಟ್ಟರೆ ಇನ್ನೂಳಿದ ಯಾವ ಶಾಲಾ-ಕಾಲೇಜುಗಳವರು ಈ ನಿಯಮವನ್ನು ಪಾಲನೆ ಮಾಡದೆ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದ್ದಾರೆ.

ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಅದರ ನವೀಕರಣ ಮಾಡುವಾಗ ಪ್ರಮುಖ ಅಂಶಗಳ ಗಣನೆ ಇಟ್ಟುಕೊಂಡು ನವೀಕರಣ ಮಾಡಬೇಕು. ಆದರೆ ಅದನ್ನು ಪರಿಶೀಲಿಸದೆ ಕೂತಲ್ಲೇ ದಾಖಲೆಗಳಿಗೆ ಉಪನಿರ್ದೇಶಕರು ಸಹಿ ಹಾಕುತ್ತಿದ್ದಾರೆಯೇ ಹೊರತು ಶಾಲಾ-ಕಾಲೇಜುಗಳವರು ನಿರಂತರವಾಗಿ ರಾಷ್ಟ್ರಗೀತೆ ಹಾಡುತ್ತಿದ್ದಾರೆಯೇ ಎಂಬುದನ್ನೂ ಮಾತ್ರ ಪರಿಶೀಲನೆ ಮಾಡಿಲ್ಲ.

‌ಈ ಬಗ್ಗೆ ಕೇಳಿದರೆ ಉಢಾಪೆ ಉತ್ತರ ನೀಡುತ್ತಾರೆ. ಹೀಗಾಗಿ ಎಲ್ಲದಕ್ಕೂ ಮಾಹಿತಿ ಹಕ್ಕು ಅರ್ಜಿ ಸಲ್ಲಿಸಿಯೇ ಮಾಹಿತಿ ಪಡೆಯುವಂತಾಗಿದೆ. ಇನ್ನಾದರೂ ಶಿಕ್ಷಣ ಇಲಾಖೆ ಉಪನಿರ್ದೇಶಕರು ಕ್ರಮ ಕೈಗೊಂಡು ಎಲ್ಲಾ ಶಾಲಾ-ಕಾಲೇಜುಗಳಲ್ಲೂ ರಾಷ್ಟ್ರಗೀತೆ ಧ್ವನಿಸುವಂತೆ ಮಾಡುತ್ತಾರೆಯೇ ಕಾದು ನೋಡಬೇಕಿದೆ. (ವರದಿ-ವಿ.ಎಸ್.ಎಸ್,ಎಂ.ಎನ್)

Leave a Reply

comments

Related Articles

error: