ಮೈಸೂರು

ಭಾರತ-ಟಿಬೆಟ್ ಎರಡು ಸಮುದಾಯಗಳ ಮಧ್ಯೆ ಬಾಂಧವ್ಯ ವೃದ್ಧಿ ಅವಶ್ಯ: ಕರ್ಮ

ಬೈಲಕುಪ್ಪೆ: ಬೈಲಕುಪ್ಪೆಯಲ್ಲಿರುವ ವಿವಿಧ ಧಾರ್ಮಿಕ ಕೇಂದ್ರಗಳ ಟಿಬೆಟಿಯನ್ಸ್ ಮತ್ತು ಲಾಮಾಗಳಿಗಾಗಿ ಆಯೋಜಿಸಿರುವ ಸಂವಾದ ಕಾರ್ಯಕ್ರಮವನ್ನು ಟಿಬೆಟ್ ಸರಕಾರದ ಧರ್ಮ ಮತ್ತು ಸಂಸ್ಕೃತಿ ಸಚಿವ ಕರ್ಮ ಅವರು ಉದ್ಘಾಟಿಸಿದರು. ಬೈಲಕುಪ್ಪೆ ವಿಭಾಗದ ಇಂಡೋ-ಟಿಬೇಟಿಯನ್ ಫ್ರೆಂಡ್‍ಶಿಪ್‍ ಸೊಸೈಟಿಯು ಈ ಕಾರ್ಯಕ್ರಮವನ್ನು ಆಯೋಜಿಸಿದೆ.

ಕಾರ್ಯಕ್ರಮ ಉದ್ಘಾಟಿಸಿದ ಮಾತನಾಡಿದ ಅವರು, ಟಿಬೆಟ್‍ಗೆ ಸ್ವಾತಂತ್ರ್ಯ ತಂದುಕೊಡುವ ನಿಟ್ಟಿನಲ್ಲಿ ಸ್ಥಳಿಯ ಭಾರತೀಯರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿ ಎಂದು ಟಿಬೆಟಿಯನ್ನರಿಗೆ ಕರೆ ನೀಡಿದರು. ಈ ನಿಟ್ಟಿನಲ್ಲಿ ಟಿಬೇಟಿಯನ್ ಫ್ರೆಂಡ್‍ಶಿಪ್‍ ಸೊಸೈಟಿಯು ಎರಡು ಸಮುದಾಯಗಳ ಸಂಸ್ಕೃತಿ, ಸಂಪ್ರದಾಯ ಮತ್ತು ಧರ್ಮವನ್ನು ಬೆಳೆಸುವ ನಿಟ್ಟಿನಲ್ಲಿ ಉತ್ತಮ ಕಾರ್ಯ ನಿರ್ವಹಿಸುತ್ತಿದೆ ಎಂದು ಶ್ಲಾಘಿಸಿದರು. ಟಿಬೆಟ್ ಸರಕಾರದ ಸಂಸತ್ ಸದಸ್ಯ ಪೆಮಾ ಡೇಲಕ್ ಅವರು ಕೂಡ ಎರಡು ಸಮುದಾಯಗಳ ಮಧ್ಯೆ ಉತ್ತಮ ಬಾಂಧವ್ಯ ವೃದ್ಧಿಯ ಅಗತ್ಯವನ್ನು ಒತ್ತಿ ಹೇಳಿದರು.

ಇಂಡೋ ಟಿಬೆಟಿಯನ್ ಫ್ರೆಂಡ್‍ಶಿಪ್ ಸೊಸೈಟಿ ಉಪಾಧ್ಯಕ್ಷ ಬಿ.ವಿ. ಜವರೇಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಟಿಬೆಟ್ ಸಪೋರ್ಟ್ ಗ್ರೂಪ್‍ನ ಆಗ್ನೇಯ ಸಂಯೋಜಕರಾದ ಜೆ.ಪಿ.ಅರಸ್ ಮೊದಲಾದವರು ಉಪಸ್ಥಿತರಿದ್ದರು.

Leave a Reply

comments

Related Articles

error: