ಮೈಸೂರು

‘ಮಾತು ಸಣ್ಣದಲ್ಲ’ ಕವನ ವಾಚನ

ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ ಶನಿವಾರ ದಸರಾ ಪ್ರಯುಕ್ತ ನಡೆಸಿದ 36ನೇ ಕವಿಗೋಷ್ಠಿ ನಡೆಯಿತು. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಕವಿಗಳು ಕವಿಗೋಷ್ಠಿಯಲ್ಲಿ ಪಾಲ್ಗೊಂಡು ಗಮನ ಸೆಳೆದರು.

ಮೈಸೂರು ದಸರಾ ಕವಿಗೋಷ್ಠಿ ಉಪಸಮಿತಿ ವತಿಯಿಂದ ಎರಡು ದಿನಗಳ ಕಾಲ ಕವಿಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿತ್ತು. ಶನಿವಾರ ನಡೆದ ಕವಿಗೋಷ್ಠಿಯು ಸಮಾನತೆ ಮತ್ತು ಸಾಮರಸ್ಯದ ಮೇಲೆ ಬೆಳಕು ಚೆಲ್ಲಿತ್ತು. ಗೋಷ್ಠಿಯಲ್ಲಿ ಪಾಲ್ಗೊಂಡ 34 ಮಂದಿ ಕವಿಗಳು-ಕವಯಿತ್ರಿಯರು ತಮ್ಮ ವಿಚಾರಧಾರೆಯನ್ನು ಹರಿಸಿದರು. ಡಾ.ಮುಕ್ತುಂಬಿ ‘ಸುಂದರ ಬದುಕು’ ಕುರಿತು ತಿಳಿಸಿದರೆ, ಕಲ್ಬುರ್ಗಿಯ ಚಂದ್ರಕಲಾ ಬಿದರಿ ‘ಯಾಕೇ ಹೀಗಾಗಿದೆ’, ಇಂದುಮತಿ ಲಮಾಣಿ ‘ಮಾತು ಸಣ್ಣದಲ್ಲ’,  ಮರಿಯಪ್ಪ ನಟೇಕರ್ ‘ಸತ್ತವನು ರೈತನಲ್ಲ’ ಕವನಗಳನ್ನು ವಾಚಿಸಿದರು. ಮತ್ತು ಇತರ ಕವಯಿತ್ರಿಯರು ಪ್ರಸ್ತುತ ಸಮಾಜದ ಸ್ಥಿತಿಯನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.

ಎರಡನೆಯ ದಿನದ ವಿಶೇಷ ಆಕರ್ಷಣೆಯೆಂದರೆ ಉರ್ದು, ತುಳು, ಕೊಡವ ಭಾಷೆಗಳಲ್ಲೂ ಕವನ ವಾಚನ ನಡೆಯಿತು. ಮೊಹಮ್ಮದ್ ಯೂಸೂಫ್ ರಹೀಂ, ಗೀತಾ ಮೊಂಡಟ್ಕ, ಮುದ್ದುಮೂಡುಬೆಳ್ಳೆ, ನಾಗೇಶ್ ಕಾಲೂರು, ತುಳು, ಕೊಡವ ಉರ್ದು ಭಾಷೆಗಳಲ್ಲಿ  ಕವನ ವಾಚಿಸಿದರು.

ಹಿರಿಯ ಸಾಹಿತಿ ಡಾ.ಎಚ್.ಎಸ್.ವೆಂಕಟೇಶ್ ಮೂರ್ತಿ ಕವಿಗೋಷ್ಠಿಯನ್ನು ಉದ್ಘಾಟಿಸಿದರು. ಸಾಹಿತಿ, ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ, ಕವಯಿತ್ರಿ ಲಲಿತಾ ಸಿದ್ದಬಸವಯ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ದಸರಾ ಉಪಸಮಿತಿಯ ವಿಶೇಷಾಧಿಕಾರಿ ಸೋಮಶೇಖರ, ಕಾರ್ಯಾಧ್ಯಕ್ಷ ನೀಲಗಿರಿ ತಳವಾರ, ಕಾರ್ಯದರ್ಶಿ ಮಂಜುನಾಥ ಬಿ. ಉಪಸ್ಥಿತರಿದ್ದರು.

 

 

Leave a Reply

comments

Related Articles

error: