ಕ್ರೀಡೆಪ್ರಮುಖ ಸುದ್ದಿ

ಟೀಂ ಇಂಡಿಯಾ ಎ, ಅಂಡರ್ ೧೯ ತಂಡಕ್ಕೆ ಇನ್ನೆರಡು ವರ್ಷ ದ್ರಾವಿಡ್ ಕೋಚ್

ಪ್ರಮುಖ ಸುದ್ದಿ, ಕ್ರೀಡೆ, ನವದೆಹಲಿ, ಜೂ.೨೦: ಟೀಂ ಇಂಡಿಯಾದ ವಾಲ್ ಎಂದೇ ಖ್ಯಾತರಾಗಿರುವ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಇನ್ನೆರಡು ವರ್ಷ ಟೀಂ ಇಂಡಿಯಾ ಎ ಹಾಗೂ ಅಂಡರ್ ೧೯ ತಂಡಕ್ಕೆ ಕೋಚ್ ಆಗಿ ಮುಂದುವರೆಯಲಿದ್ದಾರೆ.
ಬಿಸಿಸಿಐ, ಕ್ರಿಕೆಟ್ ಸಲಹಾ ಸಮಿತಿ ಟೀಂ ಇಂಡಿಯಾ ಎ ಹಾಗೂ ಅಂಡರ್ ೧೯ ತಂಡದ ಕೋಚ್ ಆಗಿ ದ್ರಾವಿಡ್ ಅವರ ಎರಡು ವರ್ಷಗಳ ಗುತ್ತಿಗೆ ವಿಸ್ತರಣೆಗೆ ಹಸಿರು ನಿಶಾನೆ ತೋರಿದೆ. ಸಿಎಸಿಯ ಸದಸ್ಯರಾದ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಮತ್ತು ವಿವಿಎಸ್ ಲಕ್ಷ್ಮಣ್ ದ್ರಾವಿಡ್ ಅವರೊಂದಿಗೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಹೀಗಾಗಿ ಅವರ ಗುತ್ತಿಗೆ ಅವಧಿ ವಿಸ್ತರಣೆ ಮಾಡಲಾಗುವುದು. ಇನ್ನು ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿರುವ ಅನಿಲ್ ಕುಂಬ್ಳೆ ಅವರಂತೆ ದ್ರಾವಿಡ್ ಸಂದರ್ಶನ ಎದುರಿಸಬೇಕಿಲ್ಲ ಎಂದು ಹೇಳಿದ್ದಾರೆ.
ಬಿಸಿಸಿಐ ಮೂಲಗಳ ಪ್ರಕಾರ ರಾಹುಲ್ ದ್ರಾವಿಡ್ ಐಪಿಎಲ್ ಒಪ್ಪಂದವನ್ನು ಕೈಬಿಡಲಿದ್ದು, ಜುಲೈನಲ್ಲಿ ಭಾರತ ಅಂಡರ್ ೧೯ ತಂಡ ಇಂಗ್ಲೆಂಡ್ ಅಂಡರ್ ೧೯ ತಂಡದೊಂದಿಗೆ ಎರಡು ನಾಲ್ಕು ದಿನದ ಪಂದ್ಯ ಹಾಗೂ ಐದು ಏಕದಿನ ಪಂದ್ಯಗಳನ್ನು ಆಡಲಿದೆ. (ವರದಿ ಬಿ.ಎಂ)

Leave a Reply

comments

Related Articles

error: