ಕರ್ನಾಟಕಪ್ರಮುಖ ಸುದ್ದಿ

ಜಾಹೀರಾತು ಶುಲ್ಕ ವಂಚನೆ ; ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ, ಎಸಿಬಿಗೆ ದೂರು

ಬೆಂಗಳೂರು, ಜೂ.20 : ಬಿಬಿಎಂಪಿ ಒಡೆತನದ ಬಸ್ ಶೆಲ್ಟರ್ ಅನ್ನು ಜಾಹೀರಾತಿಗೆ ಬಳಸಿಕೊಂಡ ರಾಜ್ಯ ಸರ್ಕಾರ 3ನೇ ಮತ್ತು 4ನೇ ವರ್ಷದ ಸಾಧನೆಯ ಪ್ರಚಾರಕ್ಕಾಗಿ ಕಳೆದ 2 ವರ್ಷಗಳ ಜಾಹೀರಾತು ಶುಲ್ಕ 68.15 ಕೋಟಿ ರೂಪಾಯಿ ಹಣವನ್ನು ವಂಚಿಸಿರುವುದಾಗಿ ಆರೋಪಿಸಿ ಬಿಜೆಪಿ ಮುಖಂಡ ಎನ್.ಆರ್. ರಮೇಶ್ ಅವರು ಸಿಎಂ ಹಾಗೂ ಸರ್ಕಾರದ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.

ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಸಾಧನೆಗಳನ್ನು ಪ್ರಚಾರ ಮಾಡುವ ನಿಟ್ಟಿನಲ್ಲಿ 439 ಬಸ್ ನಿಲ್ದಾಣಗಳ ಜಾಹೀರಾತು ಫಲಕಗಳಲ್ಲಿ ಸರ್ಕಾರದ ಸಾಧನೆ ಬಿಂಬಿಸುವ ಜಾಹೀರಾತುಗಳನ್ನು ಅಳವಡಿಸಿ ಪ್ರಚಾರ ಮಾಡಲಾಗಿತ್ತು. ಈ ಬಾಬ್ತು ಪಾಲಿಕೆಗೆ ನೀಡಬೇಕಾಗಿದ್ದ ಶುಲ್ಕವನ್ನೇ ನೀಡಿಲ್ಲ ಎಂದು ಅವರು ಆರೋಪಿಸಿದ್ದಾರೆ. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಮೇಶ್ ಅವರು, 2 ವರ್ಷಗಳಿಂದ 68.15 ಕೋಟಿ ರೂಪಾಯಿ ಜಾಹೀರಾತು ಶುಲ್ಕ ನೀಡದೆ ರಾಜ್ಯ ಸರ್ಕಾರ ವಂಚಿಸಿದೆ ಎಂದು ಆರೋಪಿಸಿದರು. ಅಲ್ಲದೆ ಈ ವಂಚನೆಯ ಬಗ್ಗೆ ಐಎಎಸ್ ಅಧಿಕಾರಿ ರಶ್ಮಿ ಅವರು ರಾಜ್ಯ ಸರ್ಕಾರಕ್ಕೆ ಡಿಮ್ಯಾಂಡ್ ನೋಟಿಸ್ ನೀಡಲು ಮುಂದಾಗಿದ್ದರು. ಇದೀಗ ಶುಲ್ಕ ವಂಚಿಸಿರುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಧಾನ ಕಾರ್ಯದರ್ಶಿ , ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ವಿರುದ್ಧ ಲೋಕಾಯುಕ್ತ ಹಾಗೂ ಎಸಿಬಿಗೆ ದೂರು ನೀಡಲಾಗಿದೆ ಎಂದರು.

-ಎನ್.ಬಿ.

Leave a Reply

comments

Related Articles

error: