ಮೈಸೂರು

ಯೋಗ ಗಿನ್ನಿಸ್: ಸ್ಪೋರ್ಟ್ ಪೆವಿಲಿಯನ್ ನಲ್ಲಿ ಯೋಗಾಭ್ಯಾಸ

ಮೈಸೂರು,ಜೂ.20-3ನೇ ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಜಿಲ್ಲಾಡಳಿತದ ವತಿಯಿಂದ ಜೂ.21 ರಂದು ನಗರದ ರೇಸ್ ಕೋರ್ಸ್ ನಲ್ಲಿ ಆಯೋಜಿಸಿರುವ ಯೋಗ ಗಿನ್ನಿಸ್ ದಾಖಲೆ ಪ್ರಯತ್ನದ ಪೂರ್ವಭಾವಿಯಾಗಿ ಮಂಗಳವಾರ ಮೈಸೂರು ವಿಶ್ವವಿದ್ಯಾನಿಲಯದ ಸ್ಪೋರ್ಟ್ ಫೆವಿಲಿಯನ್ ನಲ್ಲಿ ಅಭ್ಯಾಸ ನಡೆಸಲಾಯಿತು.

ಈ ಪೂರ್ವಭ್ಯಾಸದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಸುಮಾರು 500 ಮಂದಿ ಶಿಬಿರಾರ್ಥಿಗಳು ಭಾಗವಹಿಸಿ ಯೋಗಾಭ್ಯಾಸ ಮಾಡಿದರು.

ಈ ಸಂದರ್ಭದಲ್ಲಿ ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಪಿ.ಕೃಷ್ಣಯ್ಯ, ಸಹಾಯಕ ನಿರ್ದೇಶಕ ಡಾ.ಕೃಷ್ಣಕುಮಾರ್, ಯೋಗ ತರಬೇತುದಾರ ರವಿ, ಕ್ರಿಕೆಟ್ ತರಬೇತುದಾರ ಮನ್ಸೂರ್ ಅಹಮದ್, ಜಿಮ್ನಾಸ್ಟಿಕ್ ತರಬೇತುದಾರ ಪಾಟೀಲ್ ಸೇರಿದಂತೆ ಇತರರು ಶಿಬಿರಾರ್ಥಿಗಳೊಂದಿಗೆ ಯೋಗಾಭ್ಯಾಸ ಮಾಡಿದರು. (ವರದಿ-ಎಚ್.ಎನ್, ಎಂ.ಎನ್)

Leave a Reply

comments

Related Articles

error: