ಮೈಸೂರು

ಮನೆಯಲ್ಲಿ ಯಾರು ಇಲ್ಲದ ವೇಳೆ ಮನೆಗೆ ನುಗ್ಗಿ ಚಿನ್ನಾಭರಣ ಕಳುವು

ಮೈಸೂರು,ಜೂ.20:-  ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮುಂಬಾಗಿಲ ಪಕ್ಕದ ಬಾಗಿಲನ್ನು ಮೀಟಿದ ಕಳ್ಳರು ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಕದ್ದೊಯ್ದಿದ್ದಾರೆಂದು ಆರೋಪಿಸಿ ಮಹಿಳೆಯೋರ್ವರು ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಸಹಜ  ಎಂಬವರೇ ದೂರು ನೀಡಿದವರಾಗಿದ್ದಾರೆ. #1004, 05 ನೇ ಕ್ರಾಸ್, 02 ನೇ ಹಂತ ಶ್ರೀರಾಂಪುರ  ಜೂ.17 ರಂದು ಬೆಳಿಗ್ಗೆ 10 ರ ಸುಮಾರಿಗೆ  ಮನೆಗೆ ಬೀಗ ಹಾಕಿಕೊಂಡು ಹೋಗಿದ್ದು, ಜೂ19 ರಂದು ಬೆಳಿಗ್ಗೆ 6 ಸುಮಾರಿಗೆ ಮನೆಗೆ ಬಂದು ನೋಡಲಾಗಿ ಮುಂಬಾಗಿಲು ಬೀಗ ಹಾಕಿದ ಹಾಗೆಯೇ ಇತ್ತು.  ನಂತರ ಮನೆಯೊಳಗೆ ಬಂದು ನೋಡಲಾಗಿ ಮುಂಬಾಗಿಲ ಪಕ್ಕದಲ್ಲಿರುವ ಬಾಗಿಲನ್ನು ಯಾರೋ ಕಳ್ಳರು ಆಯುಧದಿಂದ ಮೀಟಿ ತೆಗೆದು ಮನೆಯೊಳಗೆ ಪ್ರವೇಶಗೈದು  ಗಾಡ್ರೇಜ್ ಬೀರುವಿನಲ್ಲಿ ಇಟ್ಟಿದ್ದ  ನಗದು ಹಣ 20,000,  ಸುಮಾರು 30 ಗ್ರಾಂ ತೂಕದ ಒಂದು ಚಿನ್ನದ ನೆಕ್ಲೇಸ್, 20 ಗ್ರಾಂ ತೂಕವಿರುವ ಮೂರು ಜೊತೆ ಚಿನ್ನದ ಹ್ಯಾಂಗಿಂಗ್ಸ್ ಗಳು,  25 ಗ್ರಾಂ ತೂಕವಿರುವ ನಾಲ್ಕು ಚಿನ್ನದ ಉಂಗುರಗಳು, 20 ಗ್ರಾಂ ತೂಕದ ಒಂದು ಚಿನ್ನದ ಸರವನ್ನು ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು, ಇವುಗಳ ಅಂದಾಜು ಬೆಲೆ 3,00,000 ರೂ.ಗಳಾಗಿದ್ದು, ಕಳ್ಳತನ ನಡೆಸಿದ ಆರೋಪಿಗಳನ್ನು ಪತ್ತೆ ಹಚ್ಚಿ  ವಸ್ತುಗಳನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸುವಂತೆ ದೂರು ನೀಡಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: