ಮೈಸೂರು

ವರದಕ್ಷಿಣೆ ತರುವಂತೆ ಕಿರುಕುಳ : ದೂರು

ಮೈಸೂರು, ಜೂ.20:- ಮಕ್ಕಳಾಗಲಿಲ್ಲವೆಂಬ ಕಾರಣಕ್ಕೆ ಹಿಂಸೆ ನೀಡುವ ಪತಿ ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದಾನೆಂದು ಆರೋಪಿಸಿ ಮಹಿಳೆಯೋರ್ವರು ವಿಜಯನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕವಿತಾ ಎಂಬವರೇ ದೂರು ನೀಡಿದವರಾಗಿದ್ದಾರೆ. ಜೂ.19ರಂದು  ಬೆಳಿಗ್ಗೆ ಕಿರುಕುಳ ತಾಳಲಾರದೇ ಜಿರಳೆ ಔಷಧ ಸೇವಿಸಿದ್ದರೂ ತನ್ನನ್ನು ಯಾರೂ ಆಸ್ಪತ್ರೆಗೆ  ಸೇರಿಸಿಲ್ಲ. 2014ರ ಅಕ್ಟೋಬರ್ 19 ರಂದು ಶ್ರೀಕಾಂತ್ ಎಂಬವರ ಜೊತೆ ವಿವಾಹವಾಗಿದ್ದು, ತನಗೆ ಮಕ್ಕಳಾಗಲಿಲ್ಲ  ಎಂಬ ಕಾರಣಕ್ಕೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ನೀಡಲಾಗುತ್ತಿದೆ. ಅಷ್ಟೇ ಅಲ್ಲದೇ ಶ್ರೀಕಾಂತ್ ಮತ್ತು ಆತನ ತಾಯಿ ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದಾರೆ. ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ ಎಂದು ದೂರು ಸಲ್ಲಿಸಿದ್ದಾರೆ. (ಕೆ.ಎಸ್,ಎಸ್.ಎಚ್)

 

Leave a Reply

comments

Related Articles

error: