ಕರ್ನಾಟಕ

ಅಂಚೆ ಕಚೇರಿಯ ಹಣ ಕಸಿದು ಪರಾರಿಯಾದ ಪೋಸ್ಟ್ ಮಾಸ್ಟರ್

ರಾಜ್ಯ,(ಮಂಡ್ಯ) ಜೂ.20: ಅಂಚೆ ಕಚೇರಿಯ ಠೇವಣಿದಾರರ ಸುಮಾರು 10 ಲಕ್ಷ ಹಣದೊಂದಿಗೆ  ಪೋಸ್ಟ್ ಮಾಸ್ಟರ್‌ ಪರಾರಿಯಾಗಿರುವ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ  ಭೈರಾಪುರ ಅಂಚೆ ಕಚೇರಿಯಲ್ಲಿ ನಡೆದಿದೆ.

ಭೈರಾಪುರ ಗ್ರಾಮದ ಶಂಕರ್ ಎಂಬುವನೇ ಅಂಚೆ ಕಚೇರಿಯ ಹಣ ದುರುಪಯೋಗಪಡಿಸಿಕೊಂಡು ಸುಮಾರು 2 ತಿಂಗಳಿನಿಂದ ನಾಪತ್ತೆಯಾಗಿರುವ ಪೋಸ್ಟ್‌ ಮಾಸ್ಟರ್.  ಆರೋಪಿ ಶಂಕರ್ ಸುಮಾರು 2 ಸಾವಿರ ವಿವಿಧ ಖಾತೆದಾರರ ಹಣ ದುರುಪಯೋಗ ಪಡಿಸಿಕೊಂಡು ಏಪ್ರಿಲ್ 21 ರಿಂದ  ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ. ಉಳಿತಾಯ ಖಾತೆ, ವಿಮೆ, ಆರ್.ಡಿ. ಖಾತೆ, ಎಸ್.ಎಸ್.ವೈ. ಮತ್ತಿತರರ ಖಾತೆಗಳಲ್ಲಿದ್ದ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾನೆ.

ಅಂಚೆ ಇಲಾಖೆಯ ಶ್ರೀರಂಗಪಟ್ಟಣದ  ಉನ್ನತಾಧಿಕಾರಿ ನಂಜುಂಡರಾಜ್ ಅವರಿಂದ ಆರೋಪಿ ಶಂಕರ್ ಗೆ ನೋಟೀಸ್ ಜಾರಿ ಮಾಡಲಾಗಿದೆ. ಕೆ.ಆರ್.ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.  ಸುಮಾರು 10 ಲಕ್ಷಕ್ಕೂ ಹೆಚ್ಚು ಹಣ ದುರುಪಯೋಗವಾಗಿರುವ ಅಂಶ ಬೆಳಕಿಗೆ ಬಂದಿದೆ. ಜನರು ಅಂಚ ಕಚೇರಿಗೆ ಲಗ್ಗೆಯಿಟ್ಟು ತಮ್ಮ ಹಣ ನೀಡುವಂತೆ ಒತ್ತಾಯಿಸುತ್ತಿದ್ದಾರೆ.  (ವರದಿ: ಎಸ್.ಎನ್, ಎಲ್.ಜಿ)

Leave a Reply

comments

Related Articles

error: