ಮೈಸೂರು

ರಕ್ತದಾನ ಬಹಳ ಶ್ರೇಷ್ಠವಾದದು: ಉಮೇಶ್.ಕೆ. ಶೆಣೈ

ಮೈಸೂರು, ಜೂ.೨೦: ರಕ್ತದಾನ ಬಹಳ ಶ್ರೇಷ್ಠವಾದದು. ರಕ್ತಕ್ಕೆ ಪರ್ಯಾಯ ವಸ್ತುವಿಲ್ಲದಿರುವುದರಿಂದ ರಕ್ತವನ್ನು ರೋಗಿಗೆ ನೀಡಿ ಜೀವ ಉಳಿಸಲು ನೆರವಾಗಲು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವುದರ ಮೂಲಕ ಸಹಾಯಹಸ್ತ ಚಾಚಬೇಕು ಎಂದು ಜೆ.ಕೆ.ಟೈರ್‍ಸ್‌ನ ಉಪಾಧ್ಯಕ್ಷ ಉಮೇಶ್.ಕೆ. ಶೆಣೈ ತಿಳಿಸಿದರು.
ನಗರದ ಕೆಆರ್‌ಎಸ್ ರಸ್ತೆಯಲ್ಲಿರುವ ವಿಕ್ರಾಂತ್ ಜೆ.ಕೆ ಸಂಸ್ಥೆಯ ಮಾಜಿ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ದಿ.ಹರಿಶಂಕರ್ ಸಿಂಘಾನಿಯ ಅವರ ೮೪ನೇ ಜನ್ಮಸ್ಮರಣೆಯ ಅಂಗವಾಗಿ ಬೆಂಗಳೂರಿನ ಆಸರೆ ಲಯನ್ಸ್ ಬ್ಲಡ್ ಬ್ಯಾಂಕ್, ಜೀವಧಾರ ಬ್ಲಡ್‌ಬ್ಯಾಂಕ್, ವಿವೇಕಾನಂದ ಬ್ಲಡ್‌ಬ್ಯಾಂಕ್ ಸಹಯೋಗದೊಂದಿಗೆ ಆಯೋಜಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ರಕ್ತದಾನ ಮಾಡಿ ಜೀವ ಉಳಿಸಿದರೆ ದೊಡ್ಡ ಪುಣ್ಯ ದೊರೆಯುತ್ತದೆ. ಇಂದು ಸಮಾಜದಲ್ಲಿ ಎಲ್ಲಾ ವಸ್ತುಗಳು ಸಿಕ್ಕರು ಸಹ ರಕ್ತ ಸಿಗಲು ಮನುಷ್ಯರೇ ದಾನ ಮಾಡಬೇಕು. ರಕ್ತಧಾನ ಅತೀ ಮುಖ್ಯವಾದ ಜೀವದಾನ. ಪ್ರಸ್ತುತ ಇರುವ ಜನಸಂಖ್ಯೆಯಲ್ಲಿ ಕೇವಲ ಶೇ.೧ರಷ್ಟು ಜನರು ರಕ್ತದಾನ ಮಾಡಿದರೆ ರಕ್ತದ ಕೊರತೆ ನೀಗಿಸಬಹುದೆಂದರು.
೧೨೮ ವರ್ಷ ಇತಿಹಾಸ ಹೊಂದಿರುವ ಜೆ.ಕೆ ಸಮೂಹ ಸಂಸ್ಥೆ ಕಳೆದ ೪೦ವರ್ಷಗಳಿಂದ ವಿವಿಧ ರೀತಿಯಲ್ಲಿ ಉತ್ತಮ ಕಾರ್ಯ ನಿರ್ವಹಿಸುತ್ತಿದೆ. ಕಳೆದ ೪ ವರ್ಷಗಳಿಂದ ರಕ್ತಧಾನ ಶಿಭಿರವನ್ನು ಹಮ್ಮಿಕೊಂಡಿದ್ದು ಕಳೆದ ವರ್ಷ ೭೦೮ಮಂದಿ ರಕ್ತಧಾನ ಮಾಡಿದ್ದು, ಈ ಬಾರಿ ೧೦೦೦ಮಂದಿ ರಕ್ತದಾನ ಮಾಡುವ ನಿರೀಕ್ಷೆ ಇದೆ. ದೇಶದ ಜೆ.ಕೆ.ಸಂಸ್ಥೆಯ ಸಮೂಹ ಸೇರಿದಂತೆ ಮೆಕ್ಸಿಕೋ ದೇಶದಲ್ಲಿಯೂ ಸಹ ಏಕಕಾಲದಲ್ಲಿ ರಕ್ತದಾನ ಮಾಡುತ್ತಿರುವುದು ಸಂತಸ ತಂದಿದೆ ಎಂದರು.
ಹೆಚ್‌ಆರ್ ವಿಭಾಗದ ಪ್ರಧಾನ ವ್ಯವಸ್ಥಾಪಕ ವಿಕ್ರಮ್ ಹೆಬ್ಬಾರ್, ಕಾರ್ಮಿಕ ಮುಂಖಂಡ ಸೋಮೇಶ್, ಶಿವಶಂಕರ್, ಸುಬ್ರಮಣ್ಯಂ, ಆನಂದ್ ಸ್ಟ್ಯಾನ್ಲಿ, ಪ್ರಭುದೇವ್, ನಾಣಯ್ಯ, ಚೆನ್ನಕೇಶವ, ಶ್ರೀಕಾಂತ್, ಹೊನ್ನೇಗೌಡ, ಮನೋಜ್‌ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. (ವರದಿ ಬಿ.ಎಂ)

Leave a Reply

comments

Related Articles

error: