ಲೈಫ್ & ಸ್ಟೈಲ್

ಸಿಹಿ ಪಾನೀಯಗಳ ಬದಲಿಗೆ ನೀರು ಸೇವಿಸಿ ಬೊಜ್ಜು ನಿವಾರಿಸಿಕೊಳ್ಳಿ

ದಾಹವಾದಾಗ ಸಿಹಿಯಾದ ಸೋಡಾ ಸೇರಿರುವ ಪಾನೀಯಗಳನ್ನು ಸೇವಿಸುವ ಬದಲಿಗೆ ಕಡಿಮೆ ಕ್ಯಾಲೋರಿಯಿರುವ ದೇಹಕ್ಕೆ ಸಂಜೀವಿನಿಯಾದ ನೀರನ್ನು ಕುಡಿಯುವುದರಿಂದ  ಆರೋಗ್ಯವು ವೃದ್ಧಿಸುವುದರೊಂದಿಗೆ ಬೊಜ್ಜು ನಿವಾರಣೆಯಾಗುವುದು ಎಂದು ಅಧ್ಯಯನವು ತಿಳಿಸುತ್ತದೆ.

ಸಂಶೋಧನೆಯ ಪ್ರಕಾರ ತಕ್ಷಣವೇ ಶಕ್ತಿ ನೀಡುವ ಸಕ್ಕರೆ ಸೇರಿರುವ  ಸೋಡಾಯುಕ್ತ ಪಾನೀಯ, ಸಕ್ಕರೆಯುಕ್ತ ಕಾಫಿ-ಟೀ  ಸೇವನೆಯಿಂದ ಹೆಚ್ಚಿನ ಕ್ಯಾಲೋರಿಗಳು ಸೇರಿ ದೇಹದ ತೂಕ ಹೆಚ್ಚಿವುದು. ಅವುಗಳು ಕರಗದೆ ಟೈಪ್ 2 ಡಯಾಬಿಟಿಸ್, ಹೃದಯ ಸಂಬಂಧಿ ಕಾಯಿಲೆ ಹಾಗೂ ಬೊಜ್ಜು ಕಾಡುವುದು ಎನ್ನುತ್ತಾರೆ ವರ್ಜಿನಿಯಾ ಟೆಕ್ ವಿವಿಯ ಕಿಯಾಹ್ ಜೆ. ಡ್ಯುಫೀ.

ಒಂದು ಸಿಹಿ ಪಾನೀಯ ಸೇವಿಸಿದಾಗ ಎಂಟು ಔನ್ಸ್ (28 ಗ್ರಾಮ್) ಸಕ್ಕರೆಯು ದೇಹಕ್ಕೆ ಸೇರುವುದು. ಇದರಿಂದ ಕ್ಯಾಲೋರಿ ಪ್ರಮಾಣ ಹೆಚ್ಚಾಗಿ ದೇಹದ ತೂಕವು ಹೆಚ್ಚುವುದು. ಇದರ ಬದಲಾಗಿ ಅಷ್ಟೇ ಪ್ರಮಾಣದ ನೀರನ್ನು ಸೇವಿಸುವುದರಿಂದ ಕ್ಯಾಲೋರಿ ಬರ್ನ್ ಆಗಲು ಸಹಾಯವಾಗಿ ದೇಹದ ತೂಕವನ್ನು ನಿಯಂತ್ರಿಸುವುದು. ಸಿಹಿ ಪಾನೀಯದ ಬದಲು ನೀರು ಸೇವಿಸುವುದರಿಂದ ಕ್ಯಾಲೊರಿಯ ಪ್ರಮಾಣ ಶೇಕಡಾ 17ರಿಂದ 11ರಷ್ಟು ಕಡಿಮೆಯಾದ ಬಗ್ಗೆ ಸಂಶೋಧನೆ ವೇಳೆ ತಿಳಿದು ಬಂದಿದೆ ಎಂದು ತಿಳಿಸಿದರು.

ಪ್ರತಿ ದಿನ ಸಿಹಿ ಪಾನೀಯ ಕುಡಿಯುವವರಿಗೆ ಅದರ ಬದಲು ನೀರು ನೀಡಿದಾಗ ದೇಹದಲ್ಲಿ ಶೇಕಡಾ 25ರಷ್ಟು ಕ್ಯಾಲರಿ ಕಡಿಮೆಯಾಗಿರುವುದು ಅಧ್ಯಯನದ ವೇಳೆ ದೃಢಪಟ್ಟಿದೆ ಎಂದು ಯುನಿರ್ವಸಿಟಿಯು ತನ್ನ ನಿಯತಕಾಲಿಕದಲ್ಲಿ ಪ್ರಕಟಿಸಿದೆ.

ಅತಿ ಹೆಚ್ಚು ಕ್ಯಾಲೋರಿಯಿರುವ ಸಿಹಿ ಪಾನೀಯವಾದ ಸೋಡಾ, ಕೆನೆಭರಿತ ಹಾಲು, ಸಂಸ್ಕರಿಸಿದ ಮಾಂಸ, ಬೇಕರಿ ಪದಾರ್ಧಗಳು, ಸಿಹಿ ತಿಂಡಿಗಳು, ಪಿಷ್ಟಭರಿತ ಆಹಾರವು ದೇಹದ ತೂಕ ಹೆಚ್ಚಲು ಕಾರಣವಾಗಿವೆ ಎಂದು 2015ರಲ್ಲಿ ನಡೆದ ಅಧ್ಯಯನ ತಿಳಿಸಿದೆ.

ಕಮ್ಮಿ ಕ್ಯಾಲರಿಯ ಪಾನೀಯಗಳಾದ  ಸಕ್ಕರೆಯಿಲ್ಲದ  ಕಾಫಿ ಮತ್ತು ಟೀ, ಹಣ್ಣು, ಹಸಿ ತರಕಾರಿ, ಕಾಳು, ಮೀನು ಮತ್ತು ಕೋಳಿ ಮಾಂಸವನ್ನು ಆರೋಗ್ಯಯುತ  ಆಹಾರವಾಗಿ ಬಳಸಬಹುದು,  ಅನಾರೋಗ್ಯಕರ ಸಿಹಿ ಪಾನೀಯದ ಬದಲು ಆರೋಗ್ಯಯುತ ಆಹಾರ ಕ್ರಮವನ್ನು ರೂಢಿಸಿಕೊಳ್ಳಿ. ಹೆಚ್ಚು ಹೆಚ್ಚು ನೀರು ಹಾಗೂ ತರಕಾರಿಗಳನ್ನು ಉಪಯೋಗಿಸುವುದರಿಂದ ಆರೋಗ್ಯಪೂರ್ಣ ಜೀವನ ನಡೆಸಲು ಸಾಧ್ಯವೆಂದು ಡ್ಯೂಫೀ ಅಭಿಪ್ರಾಯಪಟ್ಟರು.

Leave a Reply

comments

Related Articles

error: