ಕರ್ನಾಟಕ

ಶುಶ್ರೂಷಕರು ರಕ್ತದಾನದಿಂದಾಗುವ ಪ್ರಯೋಜನ ಕುರಿತು ತಿಳಿಸಬೇಕು : ಡಾ. ರಘುರಾಮ್

ರಾಜ್ಯ(ಚಾಮರಾಜನಗರ)ಜೂ.20:- ಶುಶ್ರೂಷಕರು ರಕ್ತದಾನಿಗಳಿಗೆ ಅರಿವು ಮೂಡಿಸುವ ಜೊತೆಗೆ ರಕ್ತದಾನದಿಂದ ಆಗುವ  ಪ್ರಯೋಜನಗಳ ಕುರಿತು ತಿಳಿಸುವ  ಕಾರ್ಯ ನಡೆಸಬೇಕು ಎಂದು ಚಾಮರಾಜನಗರದ ಜಿಲ್ಲಾಸ್ಪತ್ರೆಯ ಜಿಲ್ಲಾ ಸರ್ಜನ್ ಡಾ. ರಘುರಾಮ್ ಸರ್ವೇಗಾರ್ ತಿಳಿಸಿದರು.
ನಗರದ ಜಿಲ್ಲಾಸ್ಪತ್ರೆಯ ಹಿಂಭಾಗದ ಸರ್ಕಾರಿ ಶುಶ್ರೂಷಕರ ಶಾಲೆಯಲ್ಲಿ ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ಚಾಮರಾಜನಗರ ಜಿಲ್ಲಾ ಶಾಖೆ ಹಾಗೂ ಸರ್ಕಾರಿ ಶುಶ್ರೂಷಕರ ಶಾಲೆ ವತಿಯಿಂದ ಶಾಲಾ ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ, ರಕ್ತದಾನದ ಕುರಿತು  ಚಿತ್ರಕಲಾ ಸ್ಪರ್ಧೆ ಯನ್ನು ಗಿಡಕ್ಕೆ ನೀರೆರೆಯುವ  ಮೂಲಕ ಉದ್ಘಾಟಿಸಿದರು.  ವಿದ್ಯಾರ್ಥಿಗಳಲ್ಲಿ ಮೊದಲಿನಿಂದಲೆ ರಕ್ತದಾನ ಬಗ್ಗೆ ಪ್ರವಚನ ನೀಡಿದರೆ ವಿದ್ಯಾರ್ಥಿಗಳಲ್ಲಿ ರಕ್ತದಾನದ ಬಗ್ಗೆ ಅಸಕ್ತಿ ಇರುತ್ತದೆ.  ವಿದ್ಯಾರ್ಥಿಗಳು ತಮ್ಮ  ಸುತ್ತ ಮುತ್ತಲಿನ ಜನರಿಗೆ ರಕ್ತದಾನ ಮಾಡುವುದರ ಕುರಿತು ತಿಳಿಸಿ ಅವರಿಗೆ ಅರಿವು  ಮೂಡಿಸಿದರೆ ಎಷ್ಟೋ ಜೀವಗಳನ್ನು ಕಾಪಾಡಬಹುದು ಎಂದು ತಿಳಿಸಿದರು. ರಕ್ತದಾನಿಗಳಿಂದ ಅಪಘಾತದಲ್ಲಿ ಅಥವಾ ಶಸ್ತ್ರ ಚಿಕಿತ್ಸೆಯ ಸಮಯದಲ್ಲಿ ರಕ್ತದ ತೊಂದರೆ ಇರುವವರಿಗೆ ಅನುಕೂಲವಾಗುತ್ತದೆ. ರಕ್ತವನ್ನು ತಯಾರಿಸಲು ಸಾಧ್ಯವಿಲ್ಲ. ಅದನ್ನು  ಮನುಷ್ಯನಿಂದಲೆ ಪಡೆಯಬೇಕು ರಕ್ತದಾನ ಮಾಡಲು ಲಿಂಗಭೇದವಿಲ್ಲ ಆರೋಗ್ಯವಂತರಾಗಿದ್ದರೆ ಸಾಕು ಎಂದು ರಘುರಾಮ್ ತಿಳಿದರು.
ಭಾಷಣಸ್ಪರ್ಧೆ,ರಕ್ತದಾನದ ಬಗ್ಗೆ ನಡೆದ  ಚಿತ್ರಕಲಾಸ್ಪರ್ಧೆಯಲ್ಲಿ ಭಾಗವಹಿದ ವಿದ್ಯಾರ್ಥಿಗಳಿಗೆ ಜಿಲ್ಲಾ ಸರ್ಜನ್ ಡಾ. ರಘುರಾಮ್ ಸರ್ವೇಗಾರ್ ಬಹುಮಾನ ವಿತರಿಸಿದರು.
ಕಾರ್ಯಕ್ರಮದಲ್ಲಿ ರೇಡ್‍ಕ್ರಾಸ್ ಸಂಸ್ಥೆಯ ಖಜಾಂಚಿ  ಡಾ. ಶ್ರೀನಿವಾಸ್‍ಮೂರ್ತಿ, ರಕ್ತನಿಧಿ ಕೇಂದ್ರದ ಅಧಿಕಾರಿ ಡಾ.ಸುಜಾತ, ಡಾ. ಮುರುಗೇಶ್, ಡಾ,ಸಂಗೀತಾ, ಡಾ.ಸತ್ಯಪ್ರಕಾಶ್,ಹಾಗೂ ಮನೋನಿಧಿ ಶುಶ್ರೂಷಕರಶಾಲೆ ಮತ್ತು ಸರ್ಕಾರಿ ಶುಶ್ರೂಷಕರಶಾಲೆ ವಿದ್ಯಾರ್ಥಿಗಳು ಭಾಗವಹಿಸಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: