Uncategorizedಮೈಸೂರು

ಆತ್ಮಸ್ಥೈರ್ಯದಿಂದ ಬದುಕಲು ಕರಾಟೆ ಕಲಿಯಿರಿ : ಸೋಮಶೇಖರ

ದಸರಾ ಉತ್ಸವ ಪ್ರಯುಕ್ತ ಮೈಸೂರು ಕರಾಟೆ ಅಸೋಸಿಯೇಶನ್ ವತಿಯಿಂದ ಚಾಮುಂಡಿ ವಿಹಾರದ ಒಳಾಂಗಣ ಕ್ರೀಡಾಂಗಣದಲ್ಲಿ  ಶನಿವಾರ 10ನೇ ರಾಜ್ಯಮಟ್ಟದ ದಸರಾ ಕರಾಟೆ ಪಂದ್ಯಾವಳಿಗೆ ಚಾಲನೆ ನೀಡಲಾಯಿತು.

ದಸರಾ ಕರಾಟೆ ಪಂದ್ಯಾವಳಿಯನ್ನು ಶಾಸಕ ಸೋಮಶೇಖರ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಸುರೇಶ್ ಉದ್ಘಾಟಿಸಿದರು.

ಶಾಸಕ ಸೋಮಶೇಖರ ಮಾತನಾಡಿ ಇವತ್ತಿನ ದಿನಗಳಲ್ಲಿ ಆತ್ಮಸ್ಥೈರ್ಯದಿಂದ ಬದುಕಬೇಕೆಂದರೆ ಇಂತಹ ಸಾಹಸ ಕ್ರೀಡೆಯನ್ನು ಕಲಿಯಲೇ ಬೇಕು. ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರದಂತಹ ಪ್ರಕರಣಗಳು ಹೆಚ್ಚುತ್ತಿದ್ದು ಹೆಣ್ಣು ಮಕ್ಕಳು ಕರಾಟೆಯನ್ನು ಕಲಿತರೆ ತುಂಬಾ ಉಪಯೋಗವಾಗಲಿದೆ. ಶಾಲೆ-ಕಾಲೇಜುಗಳಲ್ಲಿಯೂ ಎಲ್ಲರಿಗೂ ಕರಾಟೆಯನ್ನು ಕಲಿಸಿದರೆ ಒಳ್ಳೆಯದು ಎಂದು ತಿಳಿಸಿದರು.

ಈ ಸಂದರ್ಭ ಕರಾಟೆ ಮಾಸ್ಟರ್ ಸಿದ್ದರಾಜು, ಮಹದೇವಸ್ವಾಮಿ, ನಾಗರಾಜು, ದೀಪಕ್, ಅಲ್ತಾಫ್ ಷಾ ಮತ್ತಿತರರು ಉಪಸ್ಥಿತರಿದ್ದರು.

ಕರಾಟೆ ಪಟುಗಳು ಒಬ್ಬರ ಮೇಲೆ ಒಬ್ಬರು ಆಕ್ರಮಣ ಮಾಡಿ ಯಾವ ರೀತಿ ತಪ್ಪಿಕೊಳ್ಳಬಹುದೆನ್ನುವುದನ್ನು ತೋರಿಸಿದರು. 250ಕ್ಕೂ ಹೆಚ್ಚು ಕರಾಟೆ ಪಟುಗಳು ಪಂದ್ಯಾವಳಿಯಲ್ಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಹೆಣ್ಣು ಮಕ್ಕಳೇ ಪಾಲ್ಗೊಂಡಿದ್ದು  ವಿಶೇಷವಾಗಿತ್ತು.

Leave a Reply

comments

Related Articles

error: