ಕರ್ನಾಟಕ

6 ಮಂದಿ ದರೋಡೆಕೋರರ ಬಂಧನ

ರಾಜ್ಯ, (ಬೆಂಗಳೂರು) ಜೂ.20: ಬೆಂಗಳೂರು ಸಿಸಿಬಿ ಪೊಲೀಸರ ಕಾರ್ಯಾಚರಣೆಯಿಂದಾಗಿ ಆರು ಮಂದಿ ದರೋಡೆಕೋರರನ್ನು ಬಂಧಿಸಲಾಗಿದೆ.

ಸರವಣ, ಗೋವಿಂದರಾಜು, ಶಬರಿನಾಥ ಸೇರಿದಂತೆ ಆರು ಆರೋಪಿಗಳು ಬಂಧಿತರು. ಎಚ್.ಎಸ್.ಆರ್ ಲೇಔಟ್ ನ ವಿನಾಯಕನಗರದಲ್ಲಿ ದರೋಡೆಗೆ ಹೊಂಚು ಹಾಕಿ ಕೂತಿದ್ದ ಇವರನ್ನು ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ.

ಬಂಧಿತರಿಂದ ಮಚ್ಚು, ಲಾಂಗು, ಖಾರದಪುಡಿ ಪೊಟ್ಟಣವನ್ನು ವಶಪಡಿಸಿಕೊಳ್ಳಲಾಗಿದೆ. (ವರದಿ: ಎಸ್.ಎನ್, ಎಲ್.ಜಿ)

Leave a Reply

comments

Related Articles

error: