ದೇಶಪ್ರಮುಖ ಸುದ್ದಿ

ಪಾಕಿಸ್ತಾನದ ಗೆಲುವಿಗೆ ಸಂಭ್ರಮಾಚರಣೆ : 15 ಜನರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲು

ಭೋಪಾಲ್, ಜೂ.20 : ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಫೈನಲ್‍ ಪಂದ್ಯದಲ್ಲಿ ಭಾರತದ ವಿರುದ್ಧ ಗೆಲುವು ಸಾಧಿಸಿದ ಪಾಕಿಸ್ತಾನದ ಪರವಾಗಿ ಘೋಷಣೆ ಕೂಗಿ ಸಂಭ್ರಮಾಚರಣೆ ನಡೆಸಿದ್ದ 15 ಜನರನ್ನು ಬಂಧಿಸಿ ದೇಶದ್ರೋಹದ ಪ್ರಕರಣ ದಾಖಲಿಸಿರುವ ಘಟನೆ ಮಧಯಪ್ರದೇಶದಲ್ಲಿ ನಡೆದಿದ್ದಾರೆ.

ಮಧ್ಯ ಪ್ರದೇಶದ ಬುರ್ಹಾನ್ಪುರ ಜಿಲ್ಲೆಯಲ್ಲಿ ಘೋಷಣೆ ಕೂಗಿ, ಪಟಾಕಿ ಸಿಡಿಸಿ ಸಂಭ್ರಮಾಚರಿಸಿದ ಘಟನೆಗೆ ಸಂಬಂಧಿಸಿದಂತೆ ಸೋಮವಾರ 15 ಮುಸ್ಲಿಮರನ್ನು ಬಂಧಿಸಲಾಗಿದ್ದು, ದೇಶದ್ರೋಹದ ಪ್ರಕರಣ ದಾಖಲಿಸಿ ಮಂಗಳವಾರ ಕೋರ್ಟ್ಗೆ ಹಾಜರು ಪಡಿಸಲಾಗಿದೆ. ಭಾನುವಾರ ಇಂಗ್ಲೆಂಡ್‍ನಲ್ಲಿ ನಡೆದ ಪಂದ್ಯದಲ್ಲಿ ಭಾರತ 180 ರನ್ ಅಂತರದಿಂದ ಸೋಲುಂಡ ನಂತರ ಮೊಹದ್ ಎಂಬ ಪ್ರದೇಶದಲ್ಲಿ ಗುಂಪು ಗೂಡಿದ ಈ ಜನ ಪಾಕಿಸ್ತಾನದ ಪರ ಘೋಷಣೆ ಕೂಗಿ ಪಟಾಕಿ ಸಿಡಿಸಿದ್ದರು. ಈ ಕುರಿತು ಸ್ಥಳೀಯರು ಪೊಲೀಸರಿಗೆ ಸುದ್ದಿ ಮುಟ್ಟಿಸಿ ದೂರು ದಾಖಲಿಸಿದ್ದರು.  ತನಿಖೆ ನಡೆಸಿದ ಷಹಪುರ ಪೊಲೀಸ್ ಠಾಣೆಯ ಅಧಿಕಾರಿಗಳು ಐಪಿಸಿ ಸೆಕ್ಷನ್ 124ಎ(ದೇಶದ್ರೋಹ), 120 ಬಿ ಅಡಿಯಲ್ಲಿ ಈ 15 ಜನರ ವಿರುದ್ಧ ಪ್ರಕರಣ ದಾಖಲು ಮಾಡಿದ್ದಾರೆ ಎಂದು ತಿಳಿದುಬಂದಿದೆ.

-ಎನ್.ಬಿ.

Leave a Reply

comments

Related Articles

error: