ಸುದ್ದಿ ಸಂಕ್ಷಿಪ್ತ

ನೂತನ ಮಹರ್ಷಿ ವಾಲ್ಮೀಕಿ ಸಂಘ ಅಸ್ತಿತ್ವಕ್ಕೆ

ಮೈಸೂರು.ಜೂ.20 : ವರುಣಾ ಹೋಬಳಿಯ, ಕೋಚನಹಳ್ಳಿಯಲ್ಲಿ ಶ್ರೀಮಹರ್ಷಿ ವಾಲ್ಮೀಕಿ ಯುವಕರ ಸಂಘವೂ ಜೂ.22 ಬೆಳಿಗ್ಗೆ 10.30ಕ್ಕೆ ಉದ್ಘಾಟನೆಗೊಳ್ಳುವುದು. ಮಹರ್ಷಿ ವಾಲ್ಮೀಕಿ ಪರಿಶಿಷ್ಠ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಚ್.ಸಿ.ಬಸವರಾಜು ಉದ್ಘಾಟಿಸುವರು, ಕೆ.ಎಂ.ಎಫ್. ಮಾಜಿ ನಿರ್ದೇಶಕ ಅಶೋಕ್ ನಾಮಪಲಕ ಅನಾವರಣಗೊಳಿಸುವರು, ಯತೀಂದ್ರ ಸಿದ್ದರಾಮಯ್ಯ ಅಧ್ಯಕ್ಷತೆ ವಹಿಸುವರು. ಬ್ರಹ್ಮನಂದಸ್ವಾಮೀಜಿ ಸಾನಿಧ್ಯ ವಹಿಸುವರು. (ಕೆ.ಎಂ.ಆರ್)

Leave a Reply

comments

Related Articles

error: