ಕರ್ನಾಟಕ

ಪತಿಯ ಕುಡಿತದ ಚಟದಿಂದ ಬೇಸತ್ತು ಚಲಿಸುವ ರೈಲಿಗೆ ತಲೆಕೊಟ್ಟು ತಾಯಿ ಮಗ ಆತ್ಮಹತ್ಯೆ

ರಾಜ್ಯ(ಬೆಂಗಳೂರು) ಜೂ.20:- ಪತಿಯ ಕುಡಿತದ ಚಟದಿಂದ ಬೇಸತ್ತು ಚಲಿಸುವ ರೈಲಿಗೆ ತಲೆಕೊಟ್ಟು ತಾಯಿ ಮಗ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ದೇವನಹಳ್ಳಿ  ಪಟ್ಟಣದ ಬೈಪಾಸ್ ರಸ್ತೆ ಬಳಿ ನಡೆದಿದೆ.
ದೇವನಹಳ್ಳಿ ತಾಲೂಕಿನ ಯಲಿಯೂರು ಗ್ರಾಮದ ನಿವಾಸಿಗಳಾದ ತಾಯಿ ಸುಜಾತ(40) ಮತ್ತು ಮಗ ಸೂರ್ಯತೇಜ(18) ಆತ್ಮಹತ್ಯೆ ಮಾಡಿಕೊಂಡಿರುವ ದುರ್ದೈವಿಗಳಾಗಿದ್ದಾರೆ. ಯಲಿಯೂರು ಸುಬ್ರಮಣಿಯನ್ನು 20 ವರ್ಷಗಳ ಹಿಂದೆ ವಿವಾಹವಾಗಿದ್ದ ಸುಜಾತ ಅವರಿಗೆ ಸೂರ್ಯತೇಜ ಮತ್ತು ಚಂದ್ರತೇಜ ಎಂಬ ಇಬ್ಬರು ಗಂಡು ಮಕ್ಕಳಿದ್ದು, ಕುಡಿತದ ಚಟ ಅಂಟಿಸಿಕೊಂಡಿದ್ದ ಸುಬ್ರಮಣಿ ದಿನನಿತ್ಯ ಕಂಠ ಪೂರ್ತಿ ಕುಡಿದು ಮನೆಯಲ್ಲಿ ಪತ್ನಿಯೊಂದಿಗೆ ಜಗಳವಾಡುತ್ತಿದ್ದ, ಕಳೆದ ವಾರ ಎರಡನೇ ಮಗ ಚಂದ್ರತೇಜ ಅಪ್ಪ ಅಮ್ಮನ ಜಗಳ ಬಿಡಿಸಲು ಹೋದ ಕಾರಣ ಅಪ್ಪ ಅವನ ಮೇಲೆ ಹಲ್ಲೆ ಮಾಡಿದ್ದ. ಇದರಿಂದ ಮನನೊಂದ ಚಂದ್ರತೇಜ(15) ಕಾಳು ಕೆಡದಂತೆ ಹಾಕುವ ಮಾತ್ರೆ ತಿಂದು ಆತ್ಮಹತ್ಯೆ ಮಾಡಿಕೊಂಡಿದ್ದನು.
ಮಗನ ಸಾವಿನಿಂದ ನೊಂದ ಸುಜಾತ ಚಂದ್ರತೇಜನ ಶವಸಂಸ್ಕಾರ ಮತ್ತು ಮೂರು ದಿನ ಕಾರ್ಯ ಮುಗಿಸಿ ಮೊದಲನೆಯ ಮಗ ಸೂರ್ಯತೇಜ ಜೊತೆ ರಾತ್ರಿ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಆತ್ಮಹತ್ಯೆಗೆ ಮುನ್ನ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಸುಬ್ರಮಣಿ ಕುಡಿದು ನೀಡುತ್ತಿದ್ದ ಕಿರುಕುಳವೇ  ಕಾರಣವಾಗಿದೆ  ಎಂದು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಬಯ್ಯಪ್ಪನಹಳ್ಳಿ ರೈಲ್ವೆ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.  (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: