ಸುದ್ದಿ ಸಂಕ್ಷಿಪ್ತ

ಟಿ.ನರಸೀಪುರ ಪುರಸಭಾ ಬಸ್ ನಿಲ್ದಾಣದಲ್ಲಿ ಸರ್ಕಾರಿ ಬಸ್ ಗಳ ನಿಲುಗಡೆಗೆ ಮನವಿ

ಮೈಸೂರು.ಜೂ.20 : ಮೈಸೂರುನಿಂದ ಟಿ.ನರಸೀಪುರ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ ಕೊಳ್ಳೇಗಾಲ ಮತ್ತು ಚಾಮರಾಜನಗರಕ್ಕೆ ಸಂಚರಿಸುವ ಕೆ.ಎಸ್.ಆರ್.ಟಿ.ಸಿ. ಬಸ್ ಗಳನ್ನು ಟಿ.ನರಸೀಪುರ ಪುರಸಭಾ ಬಸ್ ನಿಲ್ದಾಣಕ್ಕೆ ತೆರಳಿ ಕೊಂಚ ಸಮಯ ನಿಲುಗಡೆ ಮಾಡಬೇಕೆಂದು ವರುಣಾ ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ತಾಯೂರು ಪ್ರಕಾಶ್ ಒತ್ತಾಯಿಸಿದ್ದಾರೆ. ಅಲ್ಲದೇ ಮೈಸೂರಿನಿಂದ ಟಿ.ನರಸೀಪುರಕ್ಕೆ ಹಸಿರು ಅಥವಾ ಕಪ್ಪು ಹಲಗೆಯ ಕೆ.ಎಸ್.ಆರ್.ಟಿ.ಸಿ ಬಸ್ ಗಳು ಸಂಚರಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಮಾಡಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: