ಕರ್ನಾಟಕ

ಬುಡಕಟ್ಟು ಜನಾಂಗದ ಸಾಂಸ್ಕೃತಿಕ ಕಲೆಗಳ ಉಳಿವಿಗೆ ಸರ್ಕಾರದ ಪ್ರೋತ್ಸಾಹ ಅಗತ್ಯ : ರಾಮಚಂದ್ರ

ರಾಜ್ಯ(ಚಾಮರಾಜನಗರ)ಜೂ.20:-  ಬುಡಕಟ್ಟು ಜನಾಂಗದ ಸಾಂಸ್ಕೃತಿಕ ಕಲೆಗಳು ನಮ್ಮ ನಾಡಿನ ಕಲೆ ಮತ್ತು ಸಂಸ್ಕೃತಿಗಳನ್ನು ಬಿಂಬಿಸುತ್ತವೆ. ಈ ಕಲೆಗಳ ಉಳಿವಿಗೆ ಸರ್ಕಾರ ಪ್ರೋತ್ಸಾಹ ನೀಡುವುದು ಅವಶ್ಯಕವಾಗಿದೆ ಎಂದು ಜಿ.ಪಂ ಅಧ್ಯಕ್ಷ ರಾಮಚಂದ್ರ ತಿಳಿಸಿದರು.
ಬುಡಕಟ್ಟು ವ್ಯವಹಾರಗಳ ಮಂತ್ರಾಲಯ, ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ, ಜಿಲ್ಲಾಡಳಿತ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ರಾಜ್ಯ ಮಟ್ಟದ ಎರಡು ದಿನಗಳ ಬುಡಕಟ್ಟು ಉತ್ಸವಕ್ಕೆ ಮಂಗಳವಾರ  ಚಾಲನೆ ನೀಡಲಾಯಿತು. ನಗರದ ವಾಲ್ಮೀಕಿ ಭವನದಿಂದ ಕಲಾತಂಡಗಳ ಮೆರವಣಿಗೆಗೆ ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಂ. ರಾಮಚಂದ್ರ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ರಾಜ್ಯದ 45 ಜಿಲ್ಲೆಗಳಿಂದ ಬುಡಕಟ್ಟು ಜನರ ಕಲೆಗಳನ್ನು ಬಿಂಬಿಸುವ ಕಾರ್ಯಕ್ರಮ ಪ್ರಥಮವಾಗಿ ನಮ್ಮ ಜಿಲ್ಲೆಯಲ್ಲಿ ನಡೆಯುತ್ತಿದೆ. ಕರ್ನಾಟಕದ ಸಂಸ್ಕೃತಿಯನ್ನು ವಿವಿಧ ಜಿಲ್ಲೆಯ ಕಲಾವಿದರು ನಡೆಸಿ ಕೊಡುವ ಕಲೆಗಳನ್ನು ನೋಡಲು ಸಂತೋಷ ತರುತ್ತದೆ. ಜಿಲ್ಲೆಯ ಜನರು ಬುಡಕಟ್ಟು ಜನರ ಕಲೆಗಳನ್ನು ನೋಡಿ ಅವರನ್ನು ಪ್ರೋತ್ಸಾಹಿಸಿ ಎಂದರು. ಬುಡಕಟ್ಟು ಜನಾಂಗದವರಲ್ಲಿ ಈ ಮಣ್ಣಿನ ವಾಸನೆಗನುಗುಣವಾಗಿ ಕಲೆಗಳು ಮೇಳೈಸಿವೆ. ಅವರಲ್ಲಿರುವ ಸುಪ್ತವಾದ ಕಲೆಗಳನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಇದರಿಂದ ಈ ನಾಡಿನ ಹಿರಿಮೆ ಗರಿಮೆ – ಸಂಸ್ಕೃತಿ ಉಳಿಯುವಂತಾಗುತ್ತದೆ ಎಂದು ಹೇಳಿದರು.
ಬುಡಕಟ್ಟು ಉತ್ಸವಕ್ಕೆ ಮಂಗಳೂರು, ಉಡುಪಿ, ಚಾಮರಾಜನಗರ, ಮಡಿಕೇರಿ ಹಾಗೂ ಇನ್ನು ಮುಂತಾದ ಜಿಲ್ಲೆಗಳ ಕಲಾವಿದರು ಭಾಗವಹಿಸಿದ್ದರು. ಸಮಾರಂಭವನ್ನು ಲೋಕಸಭಾ ಸದಸ್ಯ ಆರ್. ಧ್ರುವನಾರಾಯಣ ಉದ್ಫಾಟಿದರು. ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಬುಡಕಟ್ಟು ಕರಕುಶಲ ವಸ್ತುಪ್ರದರ್ಶನ ಮತ್ತು ಮಾರಾಟ ಮಳಿಗೆಯನ್ನು ಉದ್ಘಾಟಿಸಲಾಯಿತು. ಈ ಸಂದರ್ಭ ಸದಾಶಿವಮೂರ್ತಿ, ಚಂದ್ರು, ಬಿ.ಕೆ. ರವಿಕುಮಾರ್,ಬುಡಕಟ್ಟು ಪ್ರಭಾರ ಅಧಿಕಾರಿ ರಾಜೇಂದ್ರಪ್ರಸಾದ್, ಸರಸ್ವತಿ, ಇನ್ನು ಮುಂತಾದವರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: