ಮೈಸೂರು

ಮಚ್ಚಿನಿಂದ ಹಲ್ಲೆ ನಡೆಸಿ ಪತ್ನಿಯನ್ನು ಕೊಲೆಗೈದ ಪತಿ

ಮೈಸೂರು,ಜೂ.20-ಗಂಡನೇ ಹೆಂಡತಿಯನ್ನು ಮಚ್ಚಿನಿಂದ ಕೊಚ್ಚಿ ಹತ್ಯೆಗೈದಿರುವ ಘಟನೆ ಜಿಲ್ಲೆಯ ಹುಣಸೂರು ತಾಲ್ಲೂಕಿನಲ್ಲಿ ನಡೆದಿದೆ.
ತಾಲ್ಲೂಕಿನ ಮಂಟೀಕೊಪ್ಪಲು ಗ್ರಾಮದ ವರಲಕ್ಷ್ಮೀ (26) ಕೊಲೆಯಾದ ದುರ್ವೈವಿ. ೭ ವರ್ಷಗಳ ಹಿಂದೆ ಧರ್ಮರಾಜು ಎಂಬುವರನ್ನು ಮದುವೆಯಾಗಿದ್ದ ವರಲಕ್ಷ್ಮಿ ಅವರಿಗೆ ಮಕ್ಕಳಾಗದ ಹಿನ್ನೆಲೆಯಲ್ಲಿ ಗಂಡ ಕಿರುಕುಳ ನೀಡುತ್ತಿದ್ದ. ಮಂಗಳವಾರ ನಡೆದ ಗಲಾಟೆ ವೇಳೆ ಗಂಡ ಮಚ್ಚಿನಿಂದ ಹಲ್ಲೆ ಮಾಡಿ ಹೆಂಡತಿಯನ್ನು ಕೊಲೆ ಮಾಡಿದ ಧರ್ಮರಾಜು ಅಲ್ಲಿಂದ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಭೇಟಿ ನೀಡಿದ ಹುಣಸೂರು ಗ್ರಾಮಾಂತರ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. (ವರದಿ-ಆರ್.ವಿ.,ಎಂ.ಎನ್)

Leave a Reply

comments

Related Articles

error: