ವಿದೇಶ

ಈ ಯುವಕನಿಗೆ ಕುತ್ತಿಗೆಯೇ ಇಲ್ಲ!

ವಿದೇಶ(ಇರಾನ್)ಜೂ.20:- ಹಾಲಿವುಡ್ ನಲ್ಲಿ ಕೆಲವು ಫಿಕ್ಷನಲ್ ಸೂಪರ್ ಹೀರೋಗಳನ್ನು ನೋಡಿದ್ದೇವೆ. ಆದರೆ ಇರಾನ್ ನಲ್ಲಿ ವಾಸಿಸುವ 24ರ ಈ ಯುವಕ ವ್ಹೇಟ್ ಲಿಫ್ಟರ್ ಸಜಾದ್ ಗರೀಬಿ ಯ ಭಾವಚಿತ್ರ ನೋಡಿದವರಿಗೆ ಈ ವ್ಯಕ್ತಿ ನಿಜವಾಗಲೂ ಇದ್ದಾನಾ ಅಂತ ಅನ್ನಿಸದೇ ಇರದು.

175 ಕೆ.ಜಿ. ತೂಕದ ಈ ಯುವಕನಿಗೆ ಕುತ್ತಿಗೆಯೇ ಇಲ್ಲವಂತೆ! ತನ್ನ ದೇಹದಿಂದಲೇ ಪ್ರಖ್ಯಾತಿಗಳಿಸಿದ ಈತನಿಗೆ ಸೈನ್ಯ ಸೇರುವ ಆಸೆಯ ಜೊತೆ ಐಎಸ್ ಐಎಸ್ ಸಂಘಟನೆಯನ್ನು ನಾಶಪಡಿಸುವ ಅಭಿಲಾಷೆಯಿದೆಯಂತೆ. ಈ ದೇಹದಿಂದ ಈತ ವೈಯುಕ್ತಿಕ ಜೀವನದಲ್ಲಿ  ಹಲವಾರು ತೊಂದರೆಗಳನ್ನು ಅನುಭವಿಸುತ್ತಿದ್ದಾನಂತೆ. ಕಾರಿನಲ್ಲಿ ಕುಳಿತುಕೊಳ್ಳಲು ಕಷ್ಟಪಡಬೇಕು. ಹೇಗಾದರೂ ಕುಳಿತುಕೊಂಡರೆ ಮತ್ತೆ ಇಳಿಯೋದು ತುಂಬಾ ಕಷ್ಟವಂತೆ. (ಎಸ್.ಎಚ್)

Leave a Reply

comments

Related Articles

error: