ಕರ್ನಾಟಕಪ್ರಮುಖ ಸುದ್ದಿ

ಕರ್ನಾಟಕದ ಮೂವರು ಪೊಲೀಸರಿಗೆ ಕೇಂದ್ರ ಸರಕಾರದಿಂದ ಅತ್ಯುತ್ತಮ ಸೇವಾ ಪದಕ

ಬೆಂಗಳೂರು, ಜೂ. 20 : ರಾಜ್ಯದ ಮೂವರು ಪೊಲೀಸರಿಗೆ ಕೇಂದ್ರ ಸರ್ಕಾರದ ಗೃಹ ಸಚಿವಾಲಯ ನೀಡುವ ಅತ್ಯುತ್ತಮ ಸೇವಾ ಪದಕ ಸಂದಿದೆ. ಪೊಲೀಸ್ ತರಬೇತಿ ಸಂಸ್ಥೆಯಲ್ಲಿ ತರಬೇತುದಾರರಿಗೆ ಹಾಗೂ ಸಹಾಯಕರಾಗಿ ಅತ್ಯುತ್ತಮ ಸೇವೆ ಸಲ್ಲಿಸಿದವರಿಗೆ ಕೇಂದ್ರ ಗೃಹ ಸಚಿವರು ಈ ಸೇವಾ ಪದಕ ನೀಡಿ ಗೌರವಿಸುವರು.

2015-16ನೇ ಸಾಲಿನನಲ್ಲಿ ನೀಡುವ ಗೌರವಕ್ಕಾಗಿ ಈ ಪೊಲೀಸರನ್ನು ಆಯ್ಕೆ ಮಾಡಲಾಗಿದ್ದು, ಕೆ.ಬಿ. ಶಿವಪ್ರಸಾದ್ ರಾವ್ (ಒಳಾಂಗಣ)- ಪಿಟಿಎಸ್ ಚನ್ನಪಟ್ಟಣ, ಕೆ.ಎಸ್. ಪಾಟೀಲ್, ಎ.ಆರ್.ಎಸ್.ಐ, ಪಿಟಿಎಸ್ ಖಾನಾಪುರ (ಹೊರಾಂಗಣ) ಹಾಗೂ ಆರ್.ಸಿ. ಮಹೇಶ್, ಎಪಿಸಿ, ಚನ್ನಪಟ್ಟಣ (ಹೊರಾಂಗಣ) – ಇವರುಗಳೇ ಕೇಂದ್ರ ಗೌರವಕ್ಕೆ ಗೌರವಕ್ಕೆ ಪಾತ್ರರಾದ ರಾಜ್ಯದ ಪೊಲೀಸರು. ಈ ಮೂವರು ಸಲ್ಲಿಸಿದ ಅತ್ಯುತ್ತಮ ಸೇವೆಯನ್ನು ಪರಿಗಣಿಸಿ ಪದಕಕ್ಕೆ ಆಯ್ಕೆ ಮಾಡಲಾಗಿದೆ ಎಂದು ತಿಳಿದುಬಂದಿದ್ದು, ಕೇಂದ್ರ ಸರಕಾರದ ಅಧೀನದಲ್ಲಿ ಬರುವ ನವದೆಹಲಿಯ ‘ಪೊಲೀಸ್ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ’ಯ ಪೊಲೀಸ್ ತರಬೇತಿ ಸಂಸ್ಥೆಗಳಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವವರನ್ನು ಗುರುತಿಸಿ 2014-15 ರಿಂದ ಈ ಪದಕ ನೀಡಿ ಗೌರವಿಸಲಾಗುತ್ತಿದೆ.

-ಎನ್.ಬಿ.ಎನ್.

Leave a Reply

comments

Related Articles

error: