ಕರ್ನಾಟಕ

ಮಡಿಕೇರಿ-ಮಾಂದಲ್ಪಟ್ಟಿ, ಮಡಿಕೇರಿ-ಸಿದ್ದಾಪುರ ಮಾರ್ಗ ಬಸ್ ಸಂಚಾರಕ್ಕೆ ಅನುಮತಿ

ಮಡಿಕೇರಿ,ಜೂ.20-ನಗರದ ಹೊರ ವಲಯದಲ್ಲಿರುವ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಕೆ.ಅನ್ವರ್ ಪಾಷ ಅವರ ಅಧ್ಯಕ್ಷೆಯಲ್ಲಿ ಮಂಗಳವಾರ ವೇಳಾಪಟ್ಟಿ ನಿಗದಿಪಡಿಸುವ ಸಭೆ ನಡೆಯಿತು.

ಸಭೆಯ ಆರಂಭದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‍ಗಳ ಸಂಚಾರ ಕುರಿತು ಚರ್ಚಿಸಲಾಯಿತು. ಮಡಿಕೇರಿ- ದೇವತ್ತೂರು-ಮಾಂದಲ್ ಪಟ್ಟಿ ಮಾರ್ಗಕ್ಕೆ ನಗರದ ಬಸ್ ನಿಲ್ದಾಣದಿಂದ ಬೆಳಗ್ಗೆ 7.30ಕ್ಕೆ ಬಸ್ ಹೊರಡಲಿದ್ದು, 8.15ಕ್ಕೆ ಮಾಂದಲ್ ಪಟ್ಟಿಗೆ ತಲುಪುತ್ತದೆ. ಮತ್ತೆ ಪುನಃ ಮಡಿಕೇರಿಗೆ ಆಗಮಿಸಲಿದೆ. ಸಂಜೆ 4 ಗಂಟೆಗೆ ಮಡಿಕೇರಿ ನಗರದಿಂದ ಹೊರಟು ಮಾಂದಲ್ ಪಟ್ಟಿಗೆ ತೆರಳಲಿದೆ. ಅಲ್ಲಿಂದ ವಾಪಸ್ಸು ಮಡಿಕೇರಿಗೆ ಬಸ್ ತಲುಪಲಿದೆ.

ಹಾಗೆಯೇ ಮಡಿಕೇರಿ-ಚೆಟ್ಟಳ್ಳಿ-ಸಿದ್ದಾಪುರ ಮಾರ್ಗ ಬಸ್ ಸಂಚಾರಕ್ಕೆ ಅನುಮತಿ ನೀಡಲಾಯಿತು. ಸಂಜೆ 6.30ಕ್ಕೆ ನಗರದ ಬಸ್ ನಿಲ್ದಾಣದಿಂದ ಹೊರಟು 7.25 ಗಂಟೆಗೆ ಸಿದ್ದಾಪುರ ತಲುಪಲಿದೆ. ಸಿದ್ದಾಪುರದಿಂದ ಬೆಳಿಗ್ಗೆ 6.15 ಕ್ಕೆ ಹೊರಟು ಬೆಳಗ್ಗೆ 7.10ಕ್ಕೆ ನಗರಕ್ಕೆ ತಲುಪಲಿದೆ.

ಈ ಸಂದರ್ಭದಲ್ಲಿ  ಮಾತನಾಡಿದ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷರಾದ ರಮೇಶ್ ಜೋಯಪ್ಪ ಅವರು ಪರವಾನಗಿ ಇಲ್ಲದೆ ಕೆ.ಎಸ್.ಆರ್.ಟಿ.ಸಿ. ಬಸ್‍ಗಳು ಸಂಚರಿಸುತ್ತಿದ್ದು, ಇವುಗಳ ನಿಯಂತ್ರಣ ಮಾಡಬೇಕು ಎಂದು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ  ಪ್ರಾದೇಶಿಕ ಸಾರಿಗೆ ಅಧಿಕಾರಿ ಅನ್ವರ್ ಪಾಷ, ಪರವಾನಗಿ ಇಲ್ಲದೆ ಸಂಚರಿಸುವ ಎಲ್ಲಾ ರೀತಿಯ  ಬಸ್‍ಗಳನ್ನು ಸ್ಥಗಿತಗೊಳಿಸಲಾಗುವುದು. ಈ ಸಂಬಂಧ ವಿಶೇಷ ತಂಡವನ್ನು ರಚಿಸಿ ಮುಂದಿನಕ್ರಮ ಕೈಗೊಳ್ಳಲಾಗುವುದು ಎಂದರು.

ಈ ಸಂದರ್ಭದಲ್ಲಿ ಕೆ.ಎಸ್.ಆರ್.ಟಿ.ಸಿ. ಡಿಪೋ ವ್ಯವಸ್ಥಾಪಕರಾದ ಗೀತಾ, ಪುತ್ತೂರು ಕೆ.ಎಸ್.ಆರ್.ಟಿ.ಸಿ. ವಿಭಾಗದ ಅಧಿಕಾರಿಗಳು, ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷರಾದ ರಮೇಶ್ ಜೋಯಪ್ಪ, ಬಿ.ಟಿ.ಪೂಣಚ್ಚ, ಪ್ರಾದೇಶಿಕ ಸಾರಿಗೆ ಕಚೇರಿಯ ವ್ಯವಸ್ಥಾಪಕರಾದ ಶಿವಣ್ಣ, ರೀಟಾ ಇತರರು ಇದ್ದರು. (ವರದಿ-ಕೆ.ಸಿ.ಐ,ಎಂ.ಎನ್)

 

Leave a Reply

comments

Related Articles

error: