ಕರ್ನಾಟಕ

ಅಪರಿಚಿತ ವಾಹನ ಡಿಕ್ಕಿ‌: ಬೈಕ್ ಸವಾರನ ಸಾವು

ಚಾಮರಾಜನಗರ,ಜೂ.20-ಅಪರಿಚಿತ ವಾಹನವೊಂದು ಸ್ಕೂಟರ್ ಗೆ ಡಿಕ್ಕಿ ಹೊಡದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ರಾಮಸಮುದ್ರದ ನಿವಾಸಿ ಷಡಕ್ಷರಿ ಎಂಬವರ ಮಗ ಶಶಿಧರ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಸಂತೆಮರಳ್ಳಿ ಕಡೆಯಿಂದ ಚಾಮರಾಜನಗರದ ಕಡೆಗೆ ಬರುವಾಗ ಮಂಗಲ ಸಮೀಪ ಅವಘಡ ಸಂಭವಿಸಿದೆ. ಸಂಚಾರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ. (ವರದಿ-ವಿ.ಎಸ್.ಎಸ್.,ಎಂ.ಎನ್)

 

Leave a Reply

comments

Related Articles

error: