ಪ್ರಮುಖ ಸುದ್ದಿ

ಬೀದಿ ನಾಯಿಗಳ ದಾಳಿಗೆ ಎಂಟು ಕುರಿಗಳು ಬಲಿ

ಪ್ರಮುಖ ಸುದ್ದಿ, ನಾಗಮಂಗಲ, ಜೂ.20: ಬೀದಿ ನಾಯಿಗಳ ದಾಳಿಗೆ 8 ಕುರಿಗಳು ಮೃತಪಟ್ಟು, ಏಳು ಕುರಿಗಳು ತೀವ್ರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ದೇವಲಾಪುರ ಹೋಬಳಿಯ ತೊರೆಮಲ್ಲನಾಯಕನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ವಸಂತ ಎಂಬುವರು 70 ಕುರಿಗಳನ್ನು ಸಾಕಿದ್ದು, ತಮ್ಮ ಮನೆಯ ಹಿಂಭಾಗದ ಕೊಟ್ಟಿಗೆಯಲ್ಲಿ ಕೂಡಿ ಹಾಕಿದ್ದ ವೇಳೆ 10ಕ್ಕೂ ಹೆಚ್ಚು ಬೀದಿ ನಾಯಿಗಳ ಹಿಂಡು ಏಕಾಏಕಿ ಕೊಟ್ಟಿಗೆಗೆ ನುಗ್ಗಿ ದಾಳಿ ನಡೆಸಿವೆ.  70 ಕುರಿಗಳ ಪೈಕಿ 15 ಕುರಿಗಳ ಮೇಲೆ ದಾಳಿ ನಡೆಸಿರುವ ಬೀದಿ ನಾಯಿಗಳು ಎಂಟು ಕುರಿಗಳನ್ನು ಕಚ್ಚಿ ಸಾಯಿಸಿವೆ. ಈ ವೇಳೆ ಗಾಬರಿಗೊಂಡ ಇನ್ನುಳಿದ ಕುರಿಗಳು ಚೀರುತ್ತಿದ್ದ ಶಬ್ದ ಕೇಳಿದ ಮನೆಯವರು ಬರುವಷ್ಟರಲ್ಲಿ ಹಲವು ಕುರಿಗಳನ್ನು ಗಾಯಗೊಳಿಸಿ ಪರಾರಿಯಾಗಿವೆ. ನಾಯಿಗಳ ದಾಳಿಯಿಂದ 50 ಸಾವಿರಕ್ಕೂ ಹೆಚ್ಚು ನಷ್ಟವಾಗಿದೆ ಎಂದು ಕುರಿ ಮಾಲೀಕ ಮತ್ತು ರೈತ ವಸಂತ ತಿಳಿಸಿದ್ದು ಬೀದಿ ನಾಯಿಗಳ ಹಾವಳಿ ತಡೆದು ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ. (ವರದಿ ಬಿ.ಎಂ)

Leave a Reply

comments

Related Articles

error: