ದೇಶಪ್ರಮುಖ ಸುದ್ದಿಮನರಂಜನೆವಿದೇಶ

ಪಾಕಿಸ್ತಾನದ ನಟರೊಂದಿಗೆ ನಟಿಸೋಲ್ಲವೆಂದ ಅಜಯ್ ದೇವ್ಗನ್ ಬೆಂಬಲಕ್ಕೆ ನಿಂತ ಕಾಜೋಲ್

ನವದೆಹಲಿ: ಪಾಕಿಸ್ತಾನ ಕಲಾವಿದರ ಜೊತೆ ನಟಿಸುವುದಿಲ್ಲ ಮತ್ತು ವೇದಿಕೆ ಹಂಚಿಕೊಳ್ಳುವುದಿಲ್ಲ ಎಂಬ ನಿಲುವು ತಳೆದಿರುವ ಅಜಯ್ ದೇವ್ಗನ್ ಅವರಿಗೆ ಪತ್ನಿ ಕಾಜೋಲ್ ಬೆಂಬಲ ವ್ಯಕ್ತಪಡಿಸಿದ್ದಾರೆ. ಪತಿ ಅಜಯ್ ನಿರ್ಧಾರದಿಂದ ನನಗೆ ಹೆಮ್ಮೆಯಾಗುತ್ತಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
ನನ್ನ ಪತಿಯ ನಿರ್ಧಾರದಲ್ಲಿ ರಾಜಕೀಯವಿಲ್ಲ. ಇದು ಅವರು ಕೈಗೊಂಡಿರುವ ಉತ್ತಮ ನಿರ್ಧಾರವಾಗಿದೆ. ಅವರ ಈ ನಿರ್ಧಾರ ಹೆಮ್ಮೆಪಡುವಂಥದ್ದು ಎಂದು ಟ್ವೀಟ್‍ ಮೂಲಕ ತಿಳಿಸಿದ್ದಾರೆ.
“ಕಲಾವಿದರು ಮತ್ತು ಭಯೋತ್ಪಾದಕರ ನಡುವೆ ಹೋಲಿಕೆ ಕಲ್ಪಿಸಬಾರದು ಎಂಬ ವಿಚಾರವನ್ನು ನಾನೂ ಒಪ್ಪುತ್ತೇನೆ. ಆದರೆ ಭಾರತ-ಪಾಕಿಸ್ತಾನ ಸಂಬಂಧದ ವಿಚಾರದಲ್ಲಿ ಈ ಅಭಿಪ್ರಾಯ ನಗಣ್ಯವಾಗುತ್ತದೆ. ಕಲೆ ಹಾಗೂ ಸಂಸ್ಕೃತಿಗಳ ಬಗ್ಗೆ ಮಾತನಾಡಲು ಇದು ಸೂಕ್ತ ಸಮಯ ಅಲ್ಲ. ಎರಡು ದೇಶಗಳ ನಡುವೆ ಹೋರಾಟ ನಡೆಯುವ ಹೊತ್ತಿನಲ್ಲಿ ಸಂಸ್ಕೃತಿ ಬಗ್ಗೆ ಮಾತನಾಡುವುದು ಸರಿಯಲ್ಲ. ದೇಶದ ವಿಚಾರ ಬಂದಾಗ ಕಲಾವಿದರು ಇತರರು ಎಂಬ ಭೇಧಭಾವ ಕಲ್ಪಿಸುವುದು ಸಾಧ್ಯವಿಲ್ಲ. ಪಾಕಿಸ್ತಾನಿ ನಟರು ತಮ್ಮ ದೇಶದ ಪರವಾಗಿ ಮಾತನಾಡುತ್ತಿದ್ದಾರೆ. ಆದರೆ ಅವರು ಭಾರತದಲ್ಲಿ ಹಣ ಗಳಿಸುತ್ತಿದ್ದಾರೆ” ಎಂದು ಸಂದರ್ಶನವೊಂದರಲ್ಲಿ ಮಾತನಾಡಿದ್ದ ಅಜಯ್ ದೇವ್ಗನ್ ತಮ್ಮ ಅಸಮಾಧಾನ ಹೊರಗೆಡವಿದ್ದರು.

Leave a Reply

comments

Related Articles

error: