ಪ್ರಮುಖ ಸುದ್ದಿ

ಮೇವಿನಲ್ಲಿ ಅಕ್ರಮವೆಸಗಿರುವವರು ಲೊಕ್ವಾ ಹೊಡೆದು ಸಾಯಲಿ: ಈಶ್ವರಪ್ಪ

ಪ್ರಮುಖ ಸುದ್ದಿ, ಬೆಂಗಳೂರು, ಜೂ.20: ಗೋಶಾಲೆಗಳ ಮೇವು ಖರೀದಿಯ ಅಕ್ರಮವೆಸಗಿರುವ ಅಧಿಕಾರಿಗಳಿಗೆ ಲಕ್ವಾ ಹೊಡೆದು ಸಾಯಲಿ ಎಂದು ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಆಕ್ರೋಶಭರಿತರಾಗಿ ಶಾಪ ಹಾಕಿದರು.

ಮಂಗಳವಾರ ವಿಧಾನಪರಿಷತ್ ಕಲಾಪದ ವೇಳೆ ನಿಯಮ 59ರ ಅಡಿ ಬರಗಾಲ ಕುರಿತು ಚರ್ಚೆಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಬರಗಾಲ ನಿರ್ವಹಣೆ ಮಾಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಗೋಶಾಲೆಗೆ ಮೇವು ಖರೀಧಿಸಲು ಮೀಸಲಾಗಿಟ್ಟಿದ್ದ  ಹಣವನ್ನು ಅಧಿಕಾರಿಗಳು ಲೂಟಿ ಹೊಡೆದಿದ್ದಾರೆ. ಅವರ ಮಕ್ಕಳಿಗೆ ಲಕ್ವಾ ಹೊಡೆದು ಸಾಯುತ್ತಾರೆಂದು ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ಹಿರಿಯ ಸದಸ್ಯ ರಾಮಚಂದ್ರೇಗೌಡ ಅವರು, ಅವರ ಮಕ್ಕಳಿಗೆ ಶಾಪ ತಟ್ಟುವುದು ಬೇಡ, ಅಧಿಕಾರಿಗಳಿಗೆ ಲಕ್ವಾ ಹೊಡೆಯಲಿ ಎಂದರು.

ಮಾತನ್ನು ಹಿಂಪಡೆದ ಈಶ್ವರಪ್ಪ ಈ ಅಧಿಕಾರಿಗಳಿಗೆ ಅಂತಿಂಥ ಕಷ್ಟ ಬರುವುದಿಲ್ಲ. ಲಕ್ವಾ ಹೊಡೆಯುವುದು ಗ್ಯಾರಂಟಿ ಎಂದು ಆಕ್ರೋಶ ಹೊರಹಾಕಿದರು. ತುಮಕೂರು  ಜಿಲ್ಲೆಯಲ್ಲಿ ಮೇವು ಖರೀದಿಗಾಗಿ 20 ಕೋಟಿ ಹಣ ಮೀಸಲಿಟ್ಟಿದ್ದಾರೆ. ಅಧಿಕಾರಿಗಳು ಅದನ್ನೇ ಲಪಟಾಯಿಸಿದ್ದಾರೆ. ಈ ಅಧಿಕಾರಿಗಳು ಎಷ್ಟು ಭ್ರಷ್ಟರೆಂದರೆ, ಈಗ ಬಂದಿರುವ ಬರಗಾಲಕ್ಕಿಂತ ಇನ್ನಷ್ಟು ಬರಗಾಲ ಬರಲಿ ಎಂದು ಎದುರು ನೋಡುತ್ತಿದ್ದಾರೆ. ಇದರಿಂದ ಮತ್ತಷ್ಟು ಹಣ ಲೂಟಿ ಹೊಡೆಯಲು ಅನುಕೂಲವಾಗುತ್ತಿದೆ ಎಂದು ವಾಗ್ವಾದ ನಡೆಸಿದರು. (ವರದಿ ಬಿ.ಎಂ)

Leave a Reply

comments

Related Articles

error: