ದೇಶಪ್ರಮುಖ ಸುದ್ದಿ

3ನೇ ಅಂತಾರಾಷ್ಟ್ರೀಯ ಯೋಗ ದಿನಕ್ಕೆ ಪ್ರಧಾನಿ ಮೋದಿ ಚಾಲನೆ : ದಿನದಲ್ಲಿ ಒಂದು ಗಂಟೆಯಾದರೂ ಯೋಗಕ್ಕೆ ಮೀಸಲಿಡಿ

ಪ್ರಮುಖಸುದ್ದಿ,ದೇಶ  (ಲಖನೌ)ಜೂ.21:-  3ನೇ ಅಂತಾರಾಷ್ಟ್ರೀಯ ಯೋಗ ದಿನಕ್ಕೆ ಉತ್ತರ ಪ್ರದೇಶದ ಲಖನೌನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಬುಧವಾರ ಬೆಳಿಗ್ಗೆ ಚಾಲನೆ ನೀಡಿದರು.

ಜಗತ್ತಿನ  180 ದೇಶಗಳಲ್ಲಿ ಯೋಗ ಫೆಸ್ಟ್ ನಡೆಸಲಾಗುತ್ತಿದೆ. ಈ ಸಂದರ್ಭ ಮಾತನಾಡಿದ ಪ್ರಧಾನಿ ಮೋದಿ ಋಷಿ ಮುನಿಗಳ ತಪಸ್ಸಿನ ಫಲವೇ ಯೋಗವಾಗಿದ್ದು,   ಆಧುನಿಕ ಜೀವನ ಶೈಲಿಗೆ ಮದ್ದಾಗಿದೆ. ಮನಸ್ಸನ್ನು ಕೇಂದ್ರೀಕರಿಸಲು ಜೀವನದ ಏರಿಳಿತಗಳಲ್ಲಿ ಆರೋಗ್ಯಯುತ ಮನಸ್ಸನ್ನು ಹೋದಿ ಬದುಕುವ ಕಲೆಯನ್ನು ಯೋಗದಿಂದ ಕಲಿಯಬಹುದು. ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ  ನಿಷ್ಕ್ರೀಯಗೊಂಡಿರುವ ದೇಹದ ಅಂಗಗಳು ಚೈತನ್ಯ ಪಡೆದುಕೊಳ್ಳಲಿವೆ ಎಂದರು. ದಿನದಲ್ಲಿ ಒಂದು ಗಂಟೆಯಾದರೂ ಯೋಗಕ್ಕಾಗಿ ಮೀಸಲಿಡಬೇಕು ಎಂದು  ಮೋದಿ ಆಶಯ ವ್ಯಕ್ತಪಡಿಸಿದರು. ಲಖನೌನಲ್ಲಿ ಮಳೆಯ ಮಧ್ಯೆಯೇ ಪ್ರಧಾನಿ ಮೋದಿ ಯೋಗ ಆರಂಭಿಸಿದ್ದಾರೆ. ಪ್ರಧಾನಿ ಮೋದಿ ಜೊತೆ  ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಹಲವು ರಾಜಕೀಯ ಗಣ್ಯರು, ಯೋಗ ಗುರುಗಳು ಪಾಲ್ಗೊಡಿದ್ದರು. ( ಕೆ.ಎಸ್,ಎಸ್.ಎಚ್)

Leave a Reply

comments

Related Articles

error: