ಪ್ರಮುಖ ಸುದ್ದಿಮೈಸೂರು

50ಸಾವಿರಕ್ಕೂ ಅಧಿಕ ಮಂದಿಯಿಂದ ಯೋಗ ಪ್ರದರ್ಶನ : ಗಿನ್ನೆಸ್ ದಾಖಲೆ ಸೇರುವ ನಿರೀಕ್ಷೆ

ಮೈಸೂರು,ಜೂ.21:- 3 ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ  ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಯೋಗಪಟುಗಳು ಗಿನ್ನೆಸ್ ದಾಖಲೆಯ ಯೋಗ ಪ್ರದರ್ಶನ ನೀಡಿದರು.
ಬೆಳಗಿ ಚುಮುಚುಮು ಚಳಿಯ ನಡುವೆ, ಹಕ್ಕಿಗಳ ಕಲರವದ ನಡುವೆ ಚಾಮುಂಡಿ ಬೆಟ್ಟದ ಎದುರಿನಲ್ಲಿರುವ ಮೈಸೂರಿನ ರೇಸ್ ಕೋರ್ಸ್ ಆವರಣದಲ್ಲಿಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಡೋಲು ಬಾರಿಸುವ ಮೂಲಕ ಯೋಗ ಪ್ರದರ್ಶನಕ್ಕೆ ಚಾಲನೆ ನೀಡಿದರು. ಯೋಗ ಪ್ರದರ್ಶನದಲ್ಲಿ 50 ಸಾವಿರಕ್ಕೂ ಹೆಚ್ಚು ಸಂಖ್ಯೆಯಲ್ಲಿ  ಯೋಗ ಪಟುಗಳು ಪಾಲ್ಗೊಂಡಿದ್ದರು.  ದೆಹಲಿಯ ರಾಜ್ ಪಥ್ ನಲ್ಲಿ 33,900 ಸಾವಿರ ಮಂದಿ ಯೋಗ ಮಾಡಿ ಗಿನ್ನಿಸ್ ದಾಖಲೆ  ನಿರ್ಮಿಸಿದ್ದರು. ಆ ದಾಖಲೆ ಅಳಿಸಲು ಮೈಸೂರಿನಲ್ಲಿ ಪ್ರಯತ್ನ ನಡೆಸಲಾಗೊದ್ದು ದಾಖಲೆ ಮಾಡುವ ನಿರೀಕ್ಷೆಯಿದೆ.
ಯೋಗ ಪಟುಗಳು  ಯೋಗದ ಹಲವು ಭಂಗಿಗಳ ಪ್ರದರ್ಶನ ನೀಡಿದರು. ಗಿನ್ನಿಸ್ ಸಂಸ್ಥೆಯ ಪ್ರತಿನಿಧಿಗಳಾದ ಆರ್.ಬಿಐ  ಜನರಲ್ ಮ್ಯಾನೇಜರ್ ಹೆಚ್.ಎಸ್.ಠಾಕೋರ್ ದೇಸಾಯಿ, ನಿವೃತ್ತ ಐಎಫ್ ಎಸ್ ಅಧಿಕಾರಿ ಎ.ಸಿ.ಲಕ್ಷಣ್, ಕುಮಾರ್ ಪಾಲ್ ಆಗಮಿಸಿದ್ದಾರೆ.
ಯೋಗ ಕಾರ್ಯಕ್ರಮದಲ್ಲಿ ರಾಜ್ಯ ಲೋಕೋಪಯೋಗಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ, ಮೈಸೂರು ರಾಜ ವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಹಿರಿಯ ಸಾಹಿತಿ ಡಾ.ಎಸ್.ಎಲ್.ಭೈರಪ್ಪ, ಸಂಸದ ಪ್ರತಾಪ್ ಸಿಂಹ, ಸಂಸದರ ಪತ್ನಿ ಅರ್ಪಿತ, ಜಿಲ್ಲಾಧಿಕಾರಿ ಡಿ.ರಂದೀಪ್, ಮೇಯರ್ ಎಂ.ಜೆ.ರವಿಕುಮಾರ್, ಶಾಸಕ ಎಂ.ಕೆ.ಸೋಮಶೇಖರ್ ಸೇರಿದಂತೆ ಹಲವರು ಪಾಲ್ಗೊಂಡಿದ್ದಾರೆ.

ಯೋಗಪಟುಗಳನ್ನು ಕರೆತರಲು ಸರ್ಕಾರಿ ಬಸ್ ವ್ಯವಸ್ಥೆ ಮಾಡಲಾಗಿತ್ತು. ಟ್ರಾಫಿಕ್ ಸಮಸ್ಯೆಗಳು ಹುಟ್ಟಿಕೊಂಡಿಲ್ಲ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಮುನ್ನೆಚ್ಚರಿಕೆ ವಹಿಸಿದ್ದರು. (ಕೆ.ಎಸ್, ಆರ್.ವಿ,ಎಸ್.ಎಚ್)

Leave a Reply

comments

Related Articles

error: