ಕರ್ನಾಟಕ

ಮಹಿಳೆಯರ ಮೇಲೆ ಕಾಡಾನೆ ದಾಳಿ

ರಾಜ್ಯ, (ಕೊಡಗು) ಜೂ.21: ಕಾಡಾನೆ ದಾಳಿಗೆ ಇಬ್ಬರು ಕಾರ್ಮಿಕ ಮಹಿಳೆಯರು ಗಂಭೀರ ಗಾಯಗೊಂಡಿರುವ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಪಾಲಿ ಬೆಟ್ಟದ ಸಮೀಪ ನಡೆದಿದೆ.

ನಬೀಸ (45) ಮತ್ತು  ನಸೀಮಾ (35) ಗಾಯಗೊಂಡ ಮಹಿಳೆಯರು. ಇಂದು ಬೆಳಿಗ್ಗೆ ಬಿ.ಕಾನಂಗಾಡು ಕಾಫಿ ತೋಟದಲ್ಲಿ ಕಾರ್ಮಿಕರೊಂದಿಗೆ  ಕೆಲಸ ಮಾಡುತ್ತಿರುವಾಗ ಕಾಡಾನೆಗಳು ದಾಳಿ ನಡೆಸಿವೆ.  ಗಾಯಗೊಂಡ ಮಹಿಳೆಯರನ್ನು ಪಾಲಿ ಬೆಟ್ಟ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಗೊಣಿಕೊಪ್ಪಲು ಆಸ್ಪತ್ರೆಗೆ ರವಾನಿಸಲಾಗಿದೆ.

ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. (ವರದಿ: ಎಸ್.ಎನ್, ಎಲ್.ಜಿ)

Leave a Reply

comments

Related Articles

error: