ಕರ್ನಾಟಕ

ಅಂಚೆ ಕಚೇರಿಯಲ್ಲಿ ಸಿಬ್ಬಂದಿಗಳಿಂದ ಎಣ್ಣೆ ಪಾರ್ಟಿ ಜೋರು

ಮಡಿಕೇರಿ,ಜೂ.21-ಮೊನ್ನೆ ಅಷ್ಟೇ ವಿಜಯಪುರ ಪೊಲೀಸ್ ಠಾಣೆಯಲ್ಲಿ ಎಣ್ಣೆ ಹೊಡೆದಿದ್ದ ಪೊಲೀಸರು ರಾಜ್ಯಾದ್ಯಾಂತ ಸುದ್ದಿಯಾಗಿದ್ದರು. ಇದೀಗ ಪೋಸ್ಟ್ ಆಫೀಸ್ ನಲ್ಲೇ ಗುಂಡು ಪಾರ್ಟಿ ನಡೆಸಿರುವ ಘಟನೆ ಸೋಮವಾರಪೇಟೆ ತಾಲ್ಲೂಕಿನ ಕೊಡ್ಲಿಪೇಟೆಯಲ್ಲಿ ನಡೆದಿದೆ.

ಕೆಲಸದ ವೇಳೆಯಲ್ಲೇ ಕಚೇರಿಯಲ್ಲಿ ಬಿರಿಯಾನಿ, ಎಣ್ಣೆಯೊಂದಿಗೆ ಕಚೇರಿಯ ಸಿಬ್ಬಂದಿ ಕರನೇಶ್ ಹಾಗೂ ದಯಾನಂದ್ ಜೋರಾಗಿ ಪಾರ್ಟಿ ಮಾಡಿದ್ದಾರೆ. ಆ ಮೂಲಕ ಇವರು ಸಾರ್ವಜನಿಕರ ಕೆಂಗಣ್ಣಿಗೆ ಬಲಿಯಾಗಿದ್ದಾರೆ.

ಕಚೇರಿ ಬರುವ ಈ ಸಿಬ್ಬಂದಿಗಳು ಬೆಳಿಗ್ಗೆಯಿಂದಲೇ ಮದ್ಯಪಾನ ಮಾಡಿಕೊಂಡು ಬರುತ್ತಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. (ವರದಿ-ಎಸ್.ಎನ್, ಎಂ.ಎನ್)

Leave a Reply

comments

Related Articles

error: