ದೇಶಪ್ರಮುಖ ಸುದ್ದಿ

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ವಿಎಚ್‍ಪಿಯಿಂದ ಶಿಲಾ ದಿಮ್ಮಿಗಳ ಸಾಗಣೆ

ಅಯೋಧ್ಯೆ, ಜೂ.21 : ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸುವ ಸಲುವಾಗಿ ವಿಶ್ವ ಹಿಂದೂ ಪರಿಷತ್ ವತಿಯಿಂದ ಮಂದಿರ ನಿರ್ಮಾಣಕ್ಕೆ ಅಗತ್ಯವಾದ ಕಲ್ಲುಗಳನ್ನು ಸಾಗಿಸುವ ಕಾರ್ಯ ಆರಂಭವಾಗಿದ್ದು, ಸುಮಾರು ಎರಡು ಲಾರಿಗಳಷ್ಟು ಕಲ್ಲುಗಳನ್ನು ತರಿಸಿಕೊಳ್ಳಲಾಗಿದೆ.

ಮಂದಿರ ನಿರ್ಮಾಣಕ್ಕೆ ಒಟ್ಟಾರೆ ನೂರು ಲಾರಿ ಕಲ್ಲುಗಳು ಅಗತ್ಯವೆಂದು ಯೋಜಿಸಲಾಗಿದ್ದು, ಮೊದಲ ಹಂತವಾಗಿ ರಾಜಸ್ಥಾನದಿಂದ ಎರಡು ಲಾರಿಗಳಷ್ಟು ಕಲ್ಲುಗಳನ್ನು ಸೋಮವಾರ ಅಯೋಧ್ಯೆಗೆ ತಂದಿಳಿಸಲಾಗಿದೆ. ಹಂತಹಂತವಾಗಿ ಇನ್ನಷ್ಟು ಕಲ್ಲುಗಳನ್ನು ವಿವಿಧ ಸ್ಥಳಗಳಲ್ಲಿ ಸಾಗಿಸಿ ಶೇಖರಿಸಿ ಇನ್ನೊಂದು ವರ್ಷದೊಳಗೆ ಮಂದಿರ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದು ವಿಶ್ವ ಹಿಂದೂ ಪರಿಷತ್ ಹಿರಿಯ ನಾಯಕ ತ್ರಿಲೋಕಿ ನಾಥ್ ಅವರು ಹೇಳಿದ್ದಾರೆ.

ವಿಶ್ವ ಹಿಂದೂ ಪರಿಷತ್ 2015 ರಲ್ಲಿಯೇ ರಾಜಸ್ಥಾನದಿಂದ ಕಲ್ಲು ಸಾಗಿಸುವ ಕೆಲಸ ಆರಂಭಿಸಿತ್ತು. ಆದರೆ 2 ಲಾರಿ ಕಲ್ಲು ತಂದಾಗಲೇ ಜಾಗೃತವಾಗಿದ್ದ ಅಂದಿನ ಅಖಿಲೇಶ್ ಯಾದವ್ ಸರ್ಕಾರ, ವಾಣಿಜ್ಯ ತೆರಿಗೆ ಇಲಾಖೆ ಮೂಲಕ ಈ ಕಾರ್ಯಕ್ಕೆ ಅಡ್ಡಿಪಡಿಸಿತ್ತು.  ಆದರ ಈಗ ಬಿಜೆಪಿ ನೇತೃತ್ವದ ಯೋಗಿ ಸರ್ಕಾರ ಅಸ್ತಿತ್ವದಲ್ಲಿದ್ದು, ವಾಣಿಜ್ಯ ತೆರಿಗೆ ಇಲಾಖೆ ಕಲ್ಲು ಸಾಗಿಸಲು ಅಗತ್ಯವಾದ ಲೈಸನ್ಸ್ ನೀಡಿದೆ. ಈ ಮೂಲಕ ಮಂದಿರ ನಿರ್ಮಿಸುವ ವಿಶ್ವ ಹಿಂದೂ ಪರಿಷತ್‍ನ ಇಚ್ಛೆಗೆ ಬೆಂಬಲ ನೀಡಿದೆ.

-ಎನ್.ಬಿ.

Leave a Reply

comments

Related Articles

error: