ಮೈಸೂರು

ಡೆಂಗ್ಯೂ ಜ್ವರಕ್ಕೆ ಸಂಬಂಧಿಸಿದಂತೆ ಜನರಿಗೆ ಅರಿವು ಮೂಡಿಸಲು ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ವಿಶೇಷ ಸಭೆ

ಮೈಸೂರು,ಜೂ.21:- ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪರವರೊಂದಿಗೆ  ಡೆಂಗ್ಯೂ ಜ್ವರಕ್ಕೆ ಸಂಬಂಧಿಸಿದಂತೆ ಜನರಿಗೆ ಅರಿವು ಮೂಡಿಸಲು ವಿಷಯ  ಸಭೆಯನ್ನು ಆಯೋಜಿಸಲಾಗಿತ್ತು.

ನಗರದ  ನಜರ್ ಬಾದ್ ನಲ್ಲಿರುವ ಸರ್ಕಾರಿ ಅತಿಥಿ ಗೃಹದಲ್ಲಿ ಬುಧವಾರ ಏರ್ಪಡಿಸಿದ ಸಭೆಯಲ್ಲಿ ಡಾ.ಚಿದಂಬರ ಮಾತನಾಡಿ ಚಳಿಗಾಲ, ಬೇಸಿಗೆಗಾಲ, ಮಳೆಗಾಲ ಹೀಗೆ ಕಾಲಕ್ಕೆ ತಕ್ಕಂತೆ ಜನರಿಗೆ ರೋಗ ಹರಡುತ್ತದೆ. ಹಾಗೆಯೇ ಡೆಂಗ್ಯೂ ಜ್ವರ ಪ್ರಕರಣ ಮೈಸೂರಲ್ಲಿ ಹೆಚ್ಚಾಗುತ್ತಿದೆ. ಪ್ರತಿ ಪ್ರಕರಣವನ್ನು ನಾವು ಡೆಂಗ್ಯೂ ಎಂದು ಪರಿಗಣಿಸಲಾಗುವುದಿಲ್ಲ. ವಿದ್ಯಾವಂತರು ಇರುವ ಅಂದರೆ ಸರಸ್ವತಿಪುರಂ, ಕುವೆಂಪುನಗರ, ಹೆಬ್ಬಾಳ್ ಪ್ರದೇಶದಲ್ಲಿಯೇ ಹೆಚ್ಚು ಡೆಂಗ್ಯೂ ಪ್ರಕರಣಗಳು ದಾಖಲಾಗಿದೆ.  ಶುದ್ದ ನೀರು ಹಾಗೂ ಸೊಳ್ಳೆ ಮೊಟ್ಟೆ ಇಟ್ಟಿರುವ ನೀರನ್ನು ಶೇಖರಿಸಿರುವುದನ್ನು ಸಚಿವರಿಗೆ ತೋರಿಸಿ  ಡೆಂಗ್ಯೂ ಹರಡುವ ಪರಿಯನ್ನು  ವಿವರಿಸಿದರು. ಎಂದು ತಿಳಿಸಿದರು. ಡೆಂಗ್ಯೂ ಹರಡದಂತೆ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದರು.
ನಂತರ  ಉಸ್ತುವಾರಿ ಸಚಿವರು ಮಾತನಾಡಿ ಡೆಂಗ್ಯೂ ಹೇಗೆ ಹರಡುತ್ತದೆ, ಸೊಳ್ಳೆ ಸಂತತಿಯನ್ನು ಹೇಗೆ ಅಭಿವೃದ್ಧಿ ಪಡಿಸುತ್ತಿದೆ ಎಂಬ ಸಂಪೂರ್ಣ ಮಾಹಿತಿಯನ್ನು ಪಡೆದು  ಅದಕ್ಕೆ ಏನು ಕ್ರಮ ತೆಗೆದುಕೊಳ್ಳಬೇಕು ಎಂದು  ಚರ್ಚಿಸಿದರು. ಜನರು ಜ್ವರ ಬಂತೆಂದರೆ ಡೆಂಗ್ಯೂ ಎಂದು ಪರಿಗಣಿಸುತ್ತಿದ್ದಾರೆ. ವೈದ್ಯರಲ್ಲಿಗೆ ತೆರಳಿ ಪರೀಕ್ಷಿಸಿಕೊಂಡು ನಿಜಾಂಶ ತಿಳಿದುಕೊಳ್ಳಿ ಎಂದರು. ಜಿಲ್ಲಾಡಳಿತ, ಪಾಲಿಕೆಗಳು ಒಗ್ಗೂಡಿ ಸಭೆ, ಅರಿವು ಕಾರ್ಯಕ್ರಮವನ್ನು ಆಯೋಜಿಸಬೇಕು ಎಂದು ಸಲಹೆ ನೀಡಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಡಿ. ರಂದೀಪ್, ಮೇಯರ್ ಎಂ.ಜೆ.ರವಿಕುಮಾರ್, ಆಯುಕ್ತ ಜಿ. ಜಗದೀಶ್, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಮಹದೇವಪ್ಪ, ಡಾ.ನಾಗರಾಜು  ಸೇರಿದಂತೆ ಇತರ ಅಧಿಕಾರಿಗಳು ಭಾಗವಹಿಸಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: