ಕರ್ನಾಟಕಪ್ರಮುಖ ಸುದ್ದಿ

ಸಬ್ ಜೈಲಿನಿಂದ ಇಬ್ಬರು ಖೈದಿಗಳು ಪರಾರಿ

ರಾಜ್ಯ(ಬೆಳಗಾವಿ)ಜೂ.21:- ಬೆಳಗಾವಿ ಜಿಲ್ಲೆ ರಾಮದುರ್ಗದಲ್ಲಿರುವ  ಸಬ್ ಜೈಲಿನಲ್ಲಿ ಇಬ್ಬರು ಖೈದಿಗಳು ಪರಾರಿಯಾಗಿದ್ದು, ಅವರಿಗಾಗಿ ಶೋಧ ಮುಂದುವರಿದಿದೆ.

ಬೈಕ್ ಕಳ್ಳತನ ಆರೋಪದಡಿ ವಿಚಾರಣಾಧೀನ ಕೈದಿಯಾಗಿದ್ದ ಸುರೇಶ ಶರಣಪ್ಪ ಚಲವಾದಿ(36) ಮನೆ ಕಳ್ಳತನದಲ್ಲಿ ಬಂಧಿತನಾಗಿದ್ದ ವಿಜಾಪುರ ಜಿಲ್ಲೆ ಹೊನ್ನಳ್ಳಿ ಮೂಲದ ಸಂತೋಷ ಶಿವಣ್ಣ ನಂದಿಹಾಳ್ (36) ಪರಾರಿಯಾಗಿರುವ ಖೈದಿಗಳಾಗಿದ್ದಾರೆ. ಇಬ್ಬರು ಖೈದಿಗಳಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಇವರಿಬ್ಬರೂ  ಕಳೆದ ಮೂರು ತಿಂಗಳಿಂದ ಜೈಲ್‌ ‌ನಲ್ಲಿದ್ದರು ಎನ್ನಲಾಗಿದ್ದು, ಇಂದು ಬೆಳಗಿನ ಜಾವ ಜೈಲಿನ ಕಿಟಕಿ ಮುರಿದು ಪರಾರಿಯಾಗಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: