ಕರ್ನಾಟಕ

ಬಸ್ ಪಾಸ್ ವಿತರಣೆಯಲ್ಲಿ ಎಡವಟ್ಟು : ತಂದೆಯ ಹೆಸರಿನಲ್ಲಿ ಮಗನಿಗೆ ಪಾಸ್ ನೀಡಿದ ಅಧಿಕಾರಿಗಳು

ರಾಜ್ಯ(ಹುಬ್ಬಳ್ಳಿ)ಜೂ.21:-  ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧಿಕಾರಿಗಳು ಪಾಸ್‌ ನೀಡುವ ವಿಷಯದಲ್ಲಿ ಬೇಜವಾಬ್ದಾರಿ ಮೆರೆದಿದ್ದಾರೆ.

ಬಸ್ ಪಾಸ್ ವಿತರಣೆಯಲ್ಲಿ ಎಡವಟ್ಟು ಮಾಡಿದ ಸಂಸ್ಥೆ, ಬಾಲಕನಿಗೆ  ಪಾಸ್ ನೀಡುವ ಬದಲಾಗಿ ಆತನ ತಂದೆಯ ಹೆಸರಿಗೆ ಪಾಸ್ ನೀಡಿದೆ. ಜೊತೆಗೆ ಇನ್ನೊಂದು ಪಾಸ್‌‌ಗೆ ಸಂಸ್ಥೆಯ ಸೀಲ್ ಹಾಕದೆ ಹಾಗೆ ಪಾಸ್ ನೀಡುವ ಮೂಲಕ ಸಂಸ್ಥೆಯ ಸಿಬ್ಬಂದಿ ಬೇಜವಾಬ್ದಾರಿ ತೋರಿಸಿದ್ದಾರೆ. ತಾಲೂಕಿನ ಬ್ಯಾಹಟ್ಟಿ ಗ್ರಾಮದ ವಿದ್ಯಾರ್ಥಿಯಾದ ಶ್ರೀಕರ ನಗರದ ಸಂಸ್ಕಾರ ಶಾಲೆಯಲ್ಲಿ 9 ನೇ ತರಗತಿ ಓದುತ್ತಿದ್ದು, ಈತನ ಹೆಸರಿನಲ್ಲಿ ಬಸ್‌ ಪಾಸ್‌ ಪಡೆಯಲು ಅರ್ಜಿ ಸಲ್ಲಿಸಲಾಗಿತ್ತು. ಆದರೆ ಈತನಿಗೆ ಪಾಸ್ ನೀಡದ ಸಂಸ್ಥೆ, ಈತನ ತಂದೆ ಸತೀಶ್‌ ಹೆಸರಲ್ಲಿ ಬ್ಯಾಹಟ್ಟಿಯಿಂದ – ಹುಬ್ಬಳ್ಳಿಗೆ ಸಂಚರಿಸಲು ಪಾಸ್ ವಿತರಣೆ ಮಾಡಿದೆ. ಸಿಬ್ಬಂದಿಗಳ ಎಡವಟ್ಟು ಅವರ ಗಮನಕ್ಕೆ ತಂದು ಪಾಸ್‌ ತಿದ್ದುಪಡಿ ಮಾಡುವಂತೆ ಶ್ರೀಕರ ಹಲವು ಬಾರಿ ಮನವಿ ಮಾಡಿದ್ದಾರೆ. ಆದರೆ ಕೆಎಸ್ಆರ್‌ಟಿಸಿ ಸಿಬ್ಬಂದಿ ತಪ್ಪು ತಿದ್ದುವ ಪ್ರಯತ್ನ ಮಾಡಿಲ್ಲ ಎಂದು ಪಾಲಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದಲ್ಲದೆ, ಶ್ರೀಕರ ಅವರ ಸಹೋದರ ಓಂಕಾರ ಎಂಬಾತನ ಪಾಸ್‌ಗೆ ಸಂಸ್ಥೆಯ ಮುದ್ರೆ ಒತ್ತದೇ ನೀಡಲಾಗಿದೆ. ನಗರದ ಪಿ.ಸಿ.ಜಾಬಿನ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿರುವ ಓಂಕಾರ ನಿತ್ಯ ಬ್ಯಾಹಟ್ಟಿಯಿಂದ ಸಂಚರಿಸುತ್ತಿದ್ದಾರೆ. ಹೀಗಾಗಿ ಕೂಡಲೇ ತಪ್ಪನ್ನು ಸರಿಪಡಿಸಬೇಕು ಎಂದು ಪೋಷಕರು ಒತ್ತಾಯಿಸುತ್ತಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: