ಕರ್ನಾಟಕ

ಸಾಲ ಮನ್ನಾ ಮಾಡಿ ರೇಷ್ಮೆ ಶಾಲು, ಜುಬ್ಬ, ಪಂಚೆ ಕೊಡಿಸುವೆ: ಶಾಸಕ ಬಸವರಾಜ ಬೊಮ್ಮಾಯಿ

ಬೆಂಗಳೂರು,ಜೂ.21-ವಿಧಾನಸೌಧದಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಬುಧವಾರ ರೈತರ ಸಾಲ ಮನ್ನಾ ಕುರಿತು ಚರ್ಚೆ ನಡೆಯಿತು.

ಈ ಸಂದರ್ಭದಲ್ಲಿ ಇವತ್ತು ರೇಷ್ಮೆ ಜುಬ್ಬಾ, ಶಾಲು ಹಾಕಿಕೊಂಡು ಬಂದಿದ್ದೀರಿ. ಇದೇ ಖುಷಿಯಲ್ಲಿ ರೈತರ ಸಾಲ ಮನ್ನಾ ಮಾಡಿ. ನಿಮಗೆ ನಾನು ಇನ್ನೊಂದು ರೇಷ್ಮೆ ಶಾಲು, ಜುಬ್ಬ, ಪಂಚೆ ಕೊಡಿಸುತ್ತೇನೆ ಎಂದು ಶಾಸಕ ಬಸವರಾಜ ಬೊಮ್ಮಾಯಿ ಸಿಎಂ ಅವರನ್ನು ಕಿಚಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು, ನೀನು‌ ಕೇಂದ್ರ ಸರ್ಕಾರಕ್ಕೆ ಹೇಳಿ ವಾಣಿಜ್ಯ ಬ್ಯಾಂಕ್ ಗಳಲ್ಲಿನ‌ ಸಾಲ ಮನ್ನಾ ಮಾಡಿಸು ನಾನೇ ನಿನ್ನ ಮಗನ ಮದುವೆಗೆ ರೇಷ್ಮೆ ಜುಬ್ಬಾ ಕೊಡಿಸ್ತೇನೆ ಎಂದರು.

ಅಲ್ಲದೆ, ಜೆಡಿಎಸ್ ಶಾಸಕ ಕೋನರೆಡ್ಡಿ ಅವರು ಸಹ ರೈತರ ಸಾಲ ಮನ್ನಾ ಮಾಡೋ ಘೋಷಣೆ ಮಾಡಿ ಎಂದು ಮನವಿ ಮಾಡಿದರು. ಕೋನರೆಡ್ಡಿ ಅವರ ಈ ಮನವಿಗೆ ಬಿಜೆಪಿ ಸದಸ್ಯರು ಬೆಂಬಲ ನೀಡಿದರು.

(ವರದಿ-ಎಸ್.ಎನ್, ಎಂ.ಎನ್)

Leave a Reply

comments

Related Articles

error: