ಮೈಸೂರು

ಜು.2: ಮನಪಾ 32 ವಾರ್ಡ್ ಉಪಚುನಾವಣೆ : ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

ಮೈಸೂರು,ಜೂ.21:- ಮೈಸೂರು ಮಹಾನಗರಪಾಲಿಕೆ ಜೆಡಿಎಸ್ ಸದಸ್ಯ ಮಹದೇಶ್ ಸದಸ್ಯತ್ವ ರದ್ದಾದ ಹಿನ್ನೆಲೆಯಲ್ಲಿ 32ನೇ ವಾರ್ಡ್‌ಗೆ  ಜು.2ರಂದು ಉಪಚುನಾವಣೆ ನಡೆಯಲಿದೆ.

ಬಂಡಾಯ ಅಭ್ಯರ್ಥಿಯಾಗಿ ಲಲನಾ ಧನರಾಜ್ ಉಮೇದುವಾರಿಕೆ ಸಲ್ಲಿಸಿದರು. ಜೂ.21ರಂದು ಪಾಲಿಕೆಯ ಕಚೇರಿಗೆ ತೆರಳಿದ ಲಲನಾ ಧನರಾಜ್ ಚುನಾವಣಾಧಿಕಾರಿ ವಿ.ಪ್ರಿಯದರ್ಶಿನಿ ಅವರಿಗೆ ಬೆಂಬಲಿಗರೊಂದಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ಇದೇ ಸಂದರ್ಭ ಜೆಡಿಎಸ್ ಅಭ್ಯರ್ಥಿ ಎಸ್ ಬಿಎಂ ಮಂಜು  ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದ್ದು, ಈ ಸಂದರ್ಭ ಮೇಯರ್ ಎಂ.ಜೆ.ರವಿಕುಮಾರ್, ಸದಸ್ಯ ಸಂದೇಶಸ್ವಾಮಿ, ಜೆಡಿಎಸ್ ನಗರಾಧ್ಯಕ್ಷ ಕೆ.ಹರೀಶ್ ಗೌಡ ಉಪಸ್ಥಿತರಿದ್ದರು.

ಬಿಜೆಪಿ ಅಭ್ಯರ್ಥಿ ಕೆ.ಮಾದೇಶ್ ಕೂಡಾ ನಾಮಪತ್ರ ಸಲ್ಲಿಸಿದರು.  ಬಿಜೆಪಿ ನಗರಾಧ್ಯಕ್ಷ ಡಾ.ಬಿ.ಮಂಜುನಾಥ್, ಮುಖಂಡರಾದ ಶ್ರೀರಾಮ್, ನಾಗೇಂದ್ರ, ಜಯಪ್ರಕಾಶ್ ಜೊತೆ ತೆರಳಿ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು. (ಹೆಚ್.ಎನ್,ಎಸ್.ಎಚ್)

Leave a Reply

comments

Related Articles

error: