ದೇಶಪ್ರಮುಖ ಸುದ್ದಿ

ಕೊಚ್ಚಿ ಮೆಟ್ರೋ ಉದ್ಘಾಟನೆ ವೇಳೆ ಮೋದಿ ಹತ್ಯೆಗೆ ನಡೆದಿತ್ತು ಸಂಚು !

ತಿರುವನಂತಪುರಂ, ಜೂನ್ 21 : ಕಳೆದ ಜೂನ್ 17 ರಂದು ಕೇರಳದ ಮೊದಲ ಮೆಟ್ರೋ ಎಂಬ ಹೆಗ್ಗಳಿಕೆ ಪಡೆದ ಕೊಚ್ಚಿ ಮೆಟ್ರೋ ರೈಲು ವ್ಯವಸ್ಥೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟಿಸಿದ್ದರು.

ಈ ವೇಳೆ ಭಯೋತ್ಪಾದಕರ ತಂಡವೊಂದು ನರೇಂದ್ರ ಮೋದಿಯವರ ಹತ್ಯೆಗೆ ಸಂಚು ರೂಪಿಸಿತ್ತು ಎಂಬ ಆತಂಕಕಾರಿ ವಿಷಯ ಬಯಲಾಗಿದೆ. ಈ ಮಾಹಿತಿಯನ್ನು ಕೇರಳ ಪೊಲೀಸರೂ ಖಚಿತ ಪಡಿಸಿದ್ದಾರೆ.

ಕೊಚ್ಚಿ ಮೆಟ್ರೊ ಉದ್ಘಾಟನೆ ವೇಳೆ ನರೇಂದ್ರ ಮೋದಿವರ ಹತ್ಯೆಗೆ ಭಯೋತ್ಪಾದಕ ತಂಡವೊಂದು ಸಕಲ ಸಿದ್ಧತೆ ನಡೆಸಿಕೊಂಡಿತ್ತು. ಅಂದು ಮೋದಿಯವರು ಇದ್ದ ಸ್ಥಳದ ಸಮೀಪದಲ್ಲೇ ಪುದುವ್ಯಾಪೀನ್ ಎಂಬ ಸ್ಥಳದಲ್ಲಿ ನಡೆಯುತ್ತಿದ್ದ ಪ್ರತಿಭಟನೆಯನ್ನು ಪೊಲೀಸರು ತಡೆದು ನಿಲ್ಲಿಸಿದ್ದರು.

ಆದರೆ ಈ ಪ್ರತಿಭಟನಾಕಾರರ ಮಧ್ಯೆ ಭಯೋತ್ಪಾದಕ ತಂಡವೂ ಇತ್ತು ಎಂಬ ಅಂಶವನ್ನು ಗುಪ್ತಚರ ದಳದ ವರದಿಗಳು ಖಚಿತಪಡಿಸಿವೆ ಎಂದು ಸ್ಥಳೀಯ ಡೆಪ್ಯುಟಿ ಜನರಲ್ ಆಫ್ ಪೊಲೀಸ್ ಟಿ.ಪಿ.ಸೇನುಕುಮಾರ್ ಅವರು ತಿಳಿಸಿದ್ದಾರೆ. ಆದರೆ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡುವುದು ಸಾಧ್ಯವಿಲ್ಲ ಎಂದು ತಿಳಿಸಿರುವ ಅವರು, ಈ ಸಂಚಿನ ಹಿಂದೆ ಯಾವ ಭಯೋತ್ಪಾದಕ ತಂಡ ಇದ್ದಿರಬಹುದು ಎಂಬ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

-ಎನ್.ಬಿ.

Leave a Reply

comments

Related Articles

error: