ಮೈಸೂರು

ಗುತ್ತಿಗೆ ಕಾರ್ಮಿಕರನ್ನು ಬಳಸಿ ಬಿಸಾಡುವ ನೀತಿಯನ್ನು ವಿರೋಧಿಸಿ ಕಾರ್ಮಿಕರ ಫೆಡರೇಷನ್ ವತಿಯಿಂದ ಪ್ರತಿಭಟನೆ

ಮೈಸೂರು,ಜೂ.21:- ಸಮಾನಕೆಲಸಕ್ಕೆ ಸಮಾನವೇತನ ನೀಡುವಂತೆ ಆಗ್ರಹಿಸಿ, ಇಂಧನ ಇಲಾಖೆಯ ಎಲ್ಲಾ ವಿಭಾಗಗಳ ಗುತ್ತಿಗೆ ಕಾರ್ಮಿಕರ ಖಾಯಮಾತಿಗೆ ಆಗ್ರಹಿಸಿ, ಗುತ್ತಿಗೆ ಕಾರ್ಮಿಕರನ್ನು ಬಳಸಿ ಬಿಸಾಡುವ ನೀತಿಯನ್ನು ವಿರೋಧಿಸಿ ಕರ್ನಾಟಕ ರಾಜ್ಯ ವಿದ್ಯುತ್ ಕಾರ್ಮಿಕರ ಫೆಡರೇಷನ್  ವತಿಯಿಂದ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ಬೆಸ್ಕಾಂನಡಿಯಲ್ಲಿ ದುಡಿಯುವ ಗ್ಯಾಂಗ್ ಮನ್ ಗಳನ್ನು ನೇರ ನೇಮಕಾತಿಯ ಹೆಸರಿನಲ್ಲಿ 250ಕ್ಕೂ ಹೆಚ್ಚು ಜನರನ್ನು ಕೆಲಸದಿಂದ ತೆಗೆದಿದ್ದಾರೆ. ಮೆಸ್ಕಾಂ ಅಡಿಯಲ್ಲಿರುವ 37ಗ್ಯಾಂಗ್ ಮನ್ ಗಳಿಗೆ ಖಾಯಂ ನೌಕರರನ್ನಾಗಿ ಪರಿಗಣಿಸಲು ಹೈಕೋರ್ಟ್ ಆದೇಶ ನೀಡಿ ಒಂದು ವರ್ಷವಾದರೂ ಪರಿಗಣಿಸದೇ ನಿರಾಕರಿಸಲಾಗುತ್ತಿದೆ. ಇಂಧನ ಇಲಾಖೆ ನಿರ್ದಿಷ್ಟಪಡಿಸಿದ ವೇತನವನ್ನು ಸರಿಯಾಗಿ ಜಾರಿ ಮಾಡಲಾಗುತ್ತಿಲ್ಲ. ಕಾರ್ಮಿಕರು ಜಾರಿ ಮಾಡಿ ಎಂದು ಹೇಳಿದ ಮಾರನೇ ದಿನವೇ ಅವರನ್ನು ಕೆಲಸದಲ್ಲಿ ಇರಿಸುವುದಿಲ್ಲ ಎಂದು ಆರೋಪಿಸಿದರು. ಸುಪ್ರೀಕೋರ್ಟ್ ನ ಆದೇಶದಂತೆ ಸಮಾನಕೆಲಸಕ್ಕೆ ಸಮಾನ ವೇತನ 21ಸಾವಿರ ರೂ.ಗಳನ್ನು ನೀಡಬೇಕು, ನೇರ ನೇಮಕಾತಿಯಲ್ಲಿ ತಮಿಳುನಾಡು, ಆಂಧ್ರ, ಸರ್ಕಾರಗಳು ಖಾಯಂ ಮಾಡಿದಂತೆ ಚಾಮುಂಡೇಶ್ವರಿ ನಿಗಮಗಳಲ್ಲಿ ದುಡಿಯುತ್ತಿರುವ ಗುತ್ತಿಗೆ ಕಾರ್ಮಿಕರನ್ನು ಖಾಯಂ ಮಾಡಬೇಕು. ಈಗಾಗಲೇ ಕರೆದಿರುವ ನೇರ ನೇಮಕಾತಿಯನ್ನು ನಿಲ್ಲಿಸಬೇಕು ಎಂಬಿತ್ಯಾದಿ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಅಧ್ಯಕ್ಷ ಸತ್ಯಬಾಬು, ಸಿಐಟಿಯು ರಾಜ್ಯಾಧ್ಯಕ್ಷೆ ಎಸ್.ವರಲಕ್ಷ್ಮಿ, ಪ್ರಧಾನ ಕಾರ್ಯದರ್ಶಿ ಶಿವಕುಮಾರ್, ಜಿಲ್ಲಾಧ್ಯಕ್ಷ ಬಾಲಾಜಿ ಸೇರಿದಂತೆ ಹಲವರು ಪಾಲಲ್ಗೊಂಡಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: