ಕರ್ನಾಟಕ

ಎಸ್ ಡಿ ಪಿ ಐ ಪಕ್ಷದ ಸಂಸ್ಥಾಪನಾ ದಿನಾಚರಣೆ

ರಾಜ್ಯ, ವಿರಾಜಪೇಟೆ, ಜೂ.21:  ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ ಡಿ ಪಿ ಐ) ಪಕ್ಷದ ಸಂಸ್ಥಾಪನಾ ದಿನದ ಅಂಗವಾಗಿ ಸ್ಥಳೀಯ ಕಾರ್ಯಕರ್ತರು ವಿರಾಜಪೇಟೆ ತಾಲೂಕಿನ  ಸಿದ್ದಾಪುರ ಘಟಕದ ಅಧ್ಯಕ್ಷ ಎ.ಪಿ ಶಾಹುಲ್ ನೇತೃತ್ವದಲ್ಲಿ ಸರಕಾರಿ ಸಮುದಾಯ ಆರೋಗ್ಯ ಕೇಂದ್ರದ ಒಳ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿದರು.

ಬಳಿಕ ಆರೋಗ್ಯ ಕೇಂದ್ರದ ಸುತ್ತ ಮುತ್ತಲಿನಲ್ಲಿ ಬೆಳೆದು ನಿಂತಿದ್ದ ಕಾಡು ಗಿಡಗಳನ್ನು ಕಡಿದು ಸ್ವಚ್ಛಗೊಳಿಸಿದರು.

ಈ ಸಂದರ್ಭದಲ್ಲಿ ವೈದ್ಯಾಧಿಕಾರಿ ಡಾ. ರಾಘವೇಂದ್ರ, ಸಿದ್ದಾಪುರ ಗ್ರಾಮ ಪಂಚಾಯತಿ ಸದಸ್ಯರಾದ ಎಂ. ಎಂ ಶೌಕತ್ ಅಲಿ, ಎ.ಎಸ್ ಹುಸೈನ್ ಪಕ್ಷದ ಪ್ರಮುಖರಾದ ಹಸ್ಸನ್, ಅಶ್ರಫ್, ಬಾಪು, ಹನೀಫ, ಶಫೀಕ್, ಸಲಾಂ, ಅಫ್ಸಲ್ ಸೇರಿದಂತೆ ಮತ್ತಿತರರು ಇದ್ದರು. (ವರದಿ: ಎಸ್.ಎನ್. ಎಲ್.ಜಿ)

Leave a Reply

comments

Related Articles

error: