ಕರ್ನಾಟಕ

ಮಹಡಿ ಮೇಲಿಂದ ಬಿದ್ದು ಗೃಹಿಣಿ ಅನುಮಾನಾಸ್ಪದವಾಗಿ ಸಾವು

ರಾಜ್ಯ(ಮಂಡ್ಯ)ಜೂ.21:-  ಮಹಡಿ ಮೇಲಿಂದ ಬಿದ್ದು ಗೃಹಿಣಿಯೋರ್ವರು  ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ಮಂಡ್ಯದಲ್ಲಿ ನಡೆದಿದೆ.

ಮೃತಳನ್ನು ಮಂಡ್ಯದ ಮದ್ದೂರು ಪಟ್ಟಣ ನಿವಾಸಿ ನಳಿನಾಕ್ಷಿ(29) ಎಂದು ಗುರುತಿಸಲಾಗಿದೆ.  ಮೃತ ಗೃಹಿಣಿ ಪೋಷಕರು ವರದಕ್ಷಿಣೆ ಕಿರುಕುಳ ನೀಡುತ್ತಿದ್ದು, ಇದು ಸಾವಲ್ಲ ಕೊಲೆ ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ.
ಮಂಡ್ಯ ಮಿಮ್ಸ್ ಆಸ್ಪತ್ರೆಯ ಮುಂದೆ ಮೃತ ಗೃಹಣಿಯ ಪೋಷಕರು ರೋದಿಸುತ್ತಿದ್ದಾರೆ. ನ್ಯಾಯಕ್ಕಾಗಿ ಮೃತ ಕುಟುಂಬಸ್ಥರು ಒತ್ತಾಯಿಸಿದ್ದು, ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: