ಮೈಸೂರು

ವೇದಿಕೆ ಮೇಲೆ ಯೋಗಾಸನ ಮಾಡಿದ ಗಣ್ಯರು

ಮೈಸೂರು, ಜೂ.21: 3 ನೇ ವರ್ಷದ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ನಗರದ ರೇಸ್ ಕೋರ್ಸ್ ನಲ್ಲಿ ಆಯೋಜಿಸಲಾಗಿದ್ದ ಗಿನ್ನೆಸ್ ದಾಖಲೆಯ ಯೋಗ ಪ್ರದರ್ಶನದ ವೇಳೆ ವೇದಿಕೆಯಲ್ಲಿದ್ದ ಗಣ್ಯರು ಸಹ ಯೋಗಾಸನ ಮಾಡಿದರು.

ಲೋಕೋಪಯೋಗಿ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್.ಸಿ. ಮಹದೇವಪ್ಪ , ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಟಾನ ಸಚಿವ  ಡಿ.ವಿ.ಸದಾನಂದಗೌಡ, ಸಂಸದ ಪ್ರತಾಪ್ ಸಿಂಹ, ಮೇಯರ್ ಎಂ.ಜೆ. ರವಿಕುಮಾರ್, ಶಾಸಕ  ಎಂ.ಕೆ.ಸೋಮಶೇಖರ್, ಕಾಗಿನೆಲೆ ಮಹಾಸಂಸ್ಥಾನ ಮಠದ ಶ್ರೀ ಶಿವಾನಂದಪುರಿ ಸ್ವಾಮೀಜಿ, ಮಾಜಿ ಸಚಿವ  ಎಸ್.ಎ. ರಾಮದಾಸ್, ಶಾಸಕ  ವಿಜಯ್ ಕುಮಾರ್, ಜೆ.ಎಸ್.ಎಸ್. ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ  ಡಾ. ಸಿ.ಜಿ. ಬೆಟ್ಸೂರುಮಠ, ಜೆ.ಎಸ್.ಎಸ್. ಮಹಾವಿದ್ಯಾಪೀಠದ ಕಾರ್ಯದರ್ಶಿ  ಮಂಜುನಾಥ್, ಸಹಕಾರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ರಾಜೀವ್, ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಇನ್ನೂ ಮೊದಲಾದ ಗಣ್ಯರು ವೇದಿಕೆಯ ಮೇಲೆ ಯೋಗ ಪ್ರದರ್ಶನ ಮಾಡಿದರು. (ವರದಿ: ಎಸ್.ಎನ್, ಎಲ್.ಜಿ)

Leave a Reply

comments

Related Articles

error: